Monday, 5 August 2013

ಕ್ವಿಟ್ ಇಂಡಿಯಾ ಚಳುವಳಿಜಮೀನ್ದಾರಿ ವ್ಯವಸ್ಥೆಯು 1793 ಕಾರ್ನ್ವಾಲೀಸ್ ರಿಂದ ಪ್ರಾರಂಭವಾಯಿತು.  ಇದು ಬಂಗಾಳ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಮುಖ್ಯವಾಗಿ ಈ ವ್ಯವಸ್ಥೆಯು ಜಾರಿಯಲ್ಲಿತ್ತು,ರಾಯತ್ವಾರಿ ವ್ಯವಸ್ಥೆ ಇದು ಲಾರ್ಡ್ ಮುನ್ರೋ ಮತ್ತು ಚಾರ್ಲ್ಸ್ ರೀಡ್ ರವರಿಂದ ಪ್ರಾರಂಭವಾಯಿತು.  ಈ ವ್ಯವಸ್ಥೆಯ ಪ್ರಕಾರ ರಿಕಾರ್ಡಿಯೋ ಸಿದ್ದಾಂತದಂತೆ ನೇರವಾಗಿ ರೈತರು ಮತ್ತು ಸರ್ಕಾರದ ನಡುವೆ ಮಣ್ಣಿನ ಗುಣ ಮತ್ತು ಬೆಳೆಯ ವಿಧದಂತೆ ಸುಮಾರು 30 ವರ್ಷಗಳ ಒಪ್ಪಂದದಂತೆ ಕಂದಾಯ ನಿರ್ಧರಿಸಲಾಗುತ್ತಿತ್ತು. ಈ ವ್ಯವಸ್ಥೆಯು ಬಾಂಬೆ, ಮದ್ರಾಸ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಜಾರಿಯಲ್ಲಿದ್ದಿತುಮಹಲ್ವಾರಿ ವ್ಯವಸ್ಥೆ ಇದು ಜಮೀನ್ದಾರಿ ವ್ಯವಸ್ಥೆಯ ಮುಂದುವರೆದ ಭಾಗವಾಗಿದ್ದು ಕಂದಾಯವನ್ನು ಕಾಲಕಾಲಕ್ಕೆ ತಕ್ಕಂತೆ ಪಾವತಿಸಬೇಕಾಗಿತ್ತು ಈ ವ್ಯವಸ್ಥೆಯು ಗಂಗಾ ತೀರದ ಪ್ರದೇಶಗಳು, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ ಮುಂತಾದ ಕಡೆ ಜಾರಿಯಲ್ಲಿತ್ತು


1857 ಮಾರ್ಚ್ 29ರಂದು ಸಿಪಾಯಿದಂಗೆಯು 19ನೇ ಇನ್ಫಾಂಟ್ರಯಲ್ಲಿದ್ದ ಮಂಗಲ್ ಪಾಂಡೆಯ ಮುಖಾಂತರ ಪ್ರಾರಂಭವಾಯಿತು ಇದಕ್ಕೆ ಪ್ರಮುಖ ಕಾರಣಗಳು ರಾಜಕೀಯ ಕಾರಣ,  ಆರ್ಥಿಕ ಕಾರಣ, ಸೈನಿಕ ಕಾರಣ, ಧಾರ್ಮಿಕ ಕಾರಣ, ಸಾಮಾಜಿಕ ಕಾರಣ ಮುಂತಾದವು ಈ ದಂಗೆಯಲ್ಲಿ ಭಾಗವಹಿಸಿದ್ದ ಪ್ರಮುಖ ವ್ಯಕ್ತಿಗಳು ದೆಹಲಿಯಿಂದ ಭಕ್ತಖಾನ್,  ಕಾನ್ಪುರದಿಂದ ನಾನಾಸಹೇಬ, ಅವಧ್ ಯಿಂದ ತಾತ್ಯಾಟೋಪಿ, ಝಾನ್ಸಿಯಿಂದ ರಾಣಿ ಲಕ್ಷೀಬಾಯಿ,  ಬಿಹಾರದಿಂದ ಕುನ್ವರ್ ಸಿಂಗ್ ಮತ್ತು ಅಮರ್ ಸಿಂಗ್, ಮಥುರದಿಂದ ದೇವಿಸಿಂಗ್ ಮತ್ತು ಮೀರತ್ ನಿಂದ ಕದಮ್ ಸಿಂಗ್.  ಈ ದಂಗೆಯು ವಿಫಲವಾಯಿತು ಇದಕ್ಕೆ ಮುಖ್ಯ ಕಾರಣಗಳು ಭಾರತದವರೇ ಆದ ಅನೇಕ ರಾಜರುಗಳು ಬ್ರಿಟೀಷರಿಗೆ ಸಹಾಯಮಾಡಿ ದಂಗೆ ಹತ್ತಿಕ್ಕಲು ಕಾರಣರಾದರು,  ದಂಗೆಕಾರರಲ್ಲಿ ಸರಿಯಾದ ಸುಧಾರಿತ ಆಯುಧಗಳಿರಲಿಲ್ಲ, ಸರಿಯಾದ ನಾಯಕತ್ವದ ಕೊರತೆ, ದಂಗೆಕಾರರಲ್ಲಿ ಸಂವಹನದ ಕೊರತೆ ಮುಂತಾದವು.  ಈ ದಂಗೆಯ ಕಾರಣದಿಂದ ಭಾರತದ ಒಕ್ಕೂಟ ಮೂಡಲು ಸಹಾಯವಾಯಿತು ಮತ್ತು 1858ರಲ್ಲಿ ಬ್ರಿಟೀಷರಿಂದ ಗೌರ್ನಮೆಂಟ್ ಆಫ್ ಇಂಡಿಯಾ ಕಾಯ್ದೆ ಜಾರಿಯಾಯಿತು.

ಸ್ವತಂತ್ರ ಪೂರ್ವದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಉದಯಗಳು


ಬ್ರಹ್ಮ ಸಮಾಜ ಇದು 1828ರಲ್ಲಿ ರಾಜಾರಾಂ ಮೋಹನ್ ರಾಯ್ ರವರಿಂದ ಸ್ಥಾಪಿಸಲ್ಪಟ್ಟಿತು ಮತ್ತು ಡೇವಿಡ್ ಹರೆಯವರ ಜೊತೆಗೂಡಿ ಹಿಂದು ಕಾಲೇಜನ್ನು ಸ್ಥಾಪಿಸಿದರು ಮತ್ತು ವೇದಾಂತ ಕಾಲೇಜನ್ನು ಸ್ಥಾಪಿಸಿದರು,  ಮತ್ತು ಇವರು ಮೀರತ್ ಉಲ್ ಅಕ್ಬರ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು
ಪ್ರಾರ್ಥನ ಸಮಾಜ ಕೇಸಬ್ ಚಂದ್ರ ಸೇನ್ ರವರಿಂದ ಪ್ರಾರಂಭವಾಯಿತು,  ಪ್ರಾರ್ಥನ ಸಭಾವು ಎಂ.ಜಿ. ರಾನಡೆಯವರಿಂದ ಪ್ರಾರಂಭವಾಯಿತು, ಆನಂದ್ ಮೋಹನ್ ಬೋಸ್ ರಿಂದ ಸಾಧಾರಣ ಬ್ರಹ್ಮಸಮಾಜ ಸ್ಥಾಪಿತವಾಯಿತು.
ಆರ್ಯ ಸಮಾಜ ಇದು 1875ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರಿಂದ ಪ್ರಾರಂಭವಾಯಿತು ಇದರ ಧ್ಯೇಯವಾಕ್ಯ ವೇದಗಳಿಗೆ ಹಿಂದಿರುಗಿ ಎಂದು ಮತ್ತು ಇವರು ಸಿದ್ದಿ ಆಂದೋಲನವನ್ನು ಪ್ರಾರಂಭಿಸಿ ಇದರ ಮೂಲಕ ಹಿಂದು ಧರ್ಮದಿಂದ ಬೇರೆಯಾದವರನ್ನು ಮತ್ತೆ ಹಿಂದು ಧರ್ಮಕ್ಕೆ ಸೇರಿಸಿಕೊಳ್ಳವುದಾಗಿತ್ತು.
ರಾಜಕೃಷ್ಣ ಆಶ್ರಮ ಇದು 1893ರಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಬಂದ ನಂತರ ವಿವೇಕಾನಂದರು 1897 ರಲ್ಲಿ ಪ್ರಾರಂಭಿಸಿದರು
ವೇದ ಸಮಾಜ ಇದು ದಕ್ಷಿಣಭಾರತದಲ್ಲಿ ಶ್ರೀಧರಲು ನಾಯ್ಡುರಿಂದ ಸ್ಥಾಪಿತವಾಯಿತು
ಧರ್ಮ ಸಭಾ ಇದು ರಾಧಾಕಾಂತ ದೇವರಿಂದ ಪ್ರಾರಂಭವಾಯಿತು
ರಾಷ್ಟ್ರೀಯ ಸಾಮಾಜಿಕ ಸಭೆ ಎಂ.ಜಿ. ರಾನಡೆಯವರಿಂದ ಪ್ರಾರಂಭವಾಯಿತು.
ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ 1915 ರಲ್ಲಿ ಗೋಪಾಲ ಕೃಷ್ಣ ಗೋಖಲೆಯವರಿಂದ ಪ್ರಾರಂಭವಾಯಿತು
ದೇವ ಸಮಾಜ ಶಿವ ನಾರಾಯಣ್ ಅಗ್ನಿಹೋರ್ತಿಯವರಿಂದ ಪ್ರಾರಂಭವಾಯಿತು
ಥಿಯಾಸಫಿಕಲ್ ಸೊಸೈಟಿ ಇದು 1875ರಲ್ಲಿ ಮೇಡಂ ಬ್ಲಾವಟ್ಸ್ಕಿಯವರಿಂದ ಪ್ರಾರಂಭವಾಯಿತು ಇದು ಭಾರತದಲ್ಲಿ ಆನಿಬೆಸೆಂಟ್ ರವರಿಂದ 1882ರಲ್ಲಿ ಪ್ರಾರಂಭವಾಯಿತು, ಅನಿಬೆಸೆಂಟ್ ರವರು ಸೆಂಟ್ರಲ್ ಹಿಂದು ಕಾಲೇಜನ್ನು ಪ್ರಾರಂಭಿಸಿದರು ನಂತರ ಇದು ಬನಾರಸ್ ಹಿಂದು ಕಾಲೇಜ್ ಎಂದು ಪ್ರಸಿದ್ಧಿಪಡೆಯಿತು
ಅಲಿಘರ್ ಚಳುವಳಿ ಇದು ಸಯ್ಯದ್ ಅಹಮದ್ ಖಾನ್ ರಿಂದ ಪ್ರಾರಂಭಿಸಲ್ಪಟ್ಟು ಮುಸ್ಲಿಮರಿಗೆ ಪಾಶ್ಚಾತ್ಯ ಮತ್ತು ಉನ್ನತ ಶಿಕ್ಷಣ ನೀಡುವುದು ಇದರ ಪ್ರಮುಖ ಗುರಿಯಾಗಿದ್ದಿತು
ಸತ್ಯ ಶೋಧಕ ಸಮಾಜ ಇದು 1873ರಲ್ಲಿ ಜ್ಯೋತಿಬಾ ಫುಲೆಯವರಿಂದ ಪ್ರಾರಂಭವಾಗಿ ಬ್ರಾಹ್ಮಣಿಕೆಯ ವಿರುದ್ಧದ ಧ್ವನಿಯಾಗಿ ಹಿಂದುಳಿದ ಮತ್ತು ಕೆಳವರ್ಗಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿತ್ತು

ಜಸ್ಟೀಸ್ ಪಾರ್ಟಿ ಮೂಮೆಂಟ್ ಈ ಚಳುವಳಿಯು  ಟಿ.ಎಂ.ನಾಯರ್ ಮತ್ತು ಆರ್.ಟಿ.ಚೆಟ್ಟಿಯವರಿಂದ ಪ್ರಾರಂಭವಾಗಿ  ಇವರು ಸ್ಥಾಪಿಸಿದ ಸೌತ್ ಇಂಡಿಯನ್ ಲಿಬರಲ್ ಫೆಡರೇಷನ್ ಸಂಘದ ಮೂಲಕ ಆಡಳಿತದಲ್ಲಿ ಮತ್ತು ಸಮಾಜದಲ್ಲಿ ಬ್ರಾಹ್ಮಣಿಕೆಯ ಪ್ರಾಭಲ್ಯ ತಡೆಯುವುದಾಗಿತ್ತು

ಸೆಲ್ಫ್ ರೆಸ್ಪೆಕ್ಟ್ ಮೂಮೆಂಟ್ ಇದು ತಮಿಳುನಾಡಿನಲ್ಲಿ 1925ರಲ್ಲಿ ಇ.ವಿ.ರಾಮಸ್ವಾಮಿ ನಾಯ್ಕರ್ ರವರಿಂದ ಪ್ರಾರಂಭವಾಯಿತು.

ಡಾ: ಅಂಬೇಡ್ಕರ್ ರವರು ಬಹಿಷ್ಕೃತ ಹಿತಕಾರಿಣಿ ಸಭಾ, ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ ಎಂಬ ಸಂಸ್ಥೆಯನ್ನು ಹಿಂದುಳಿದ ವರ್ಗದವರಿಗಾಗಿ ಪ್ರಾರಂಭಿಸಿದರು, ಇವರು ಪರಿಶಿಷ್ಟ ಜಾತಿಗಳ ಫೆಡರೇಷನ್ ಎಂಬ ರಾಜಕೀಯ ಪಾರ್ಟಿಯನ್ನು ಸ್ಥಾಪಿಸಿದರು. 

ನೀಲಿ ಬೆಳೆಗಾರರ ದಂಗೆ ಈ ದಂಗೆಯು 1860ರಲ್ಲಿ ಬಂಗಾಳದ ನೀಲಿ ಬೆಳೆಗಾರರು ಮತ್ತು ಬ್ರಿಟೀಷ್ ಕಾರ್ಖಾನೆಗಳ ವಿರುದ್ಧ ನೆಡೆಯಿತು ಇದರ ನೇತೃತ್ವವನ್ನು ವಹಿಸಿದವರು ದಿಗಂಬರ ಬಿಸ್ವಾಸ್ ಮತ್ತು ವಿಷ್ಣು ಬಿಸ್ವಾಸ್ ಈ ದಂಗೆಗೆ ಸಂಬಂಧ ಪಟ್ಟಂತೆ ದೀನ ಬಂಧುಮಿತ್ರರವರು ನೀಲ ದರ್ಪಣ್ ಮಿತ್ರ ಎಂಬ ಕೃತಿ ರಚಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 1885ರಲ್ಲಿ ಏ.ಓ.ಹ್ಯೂಂ ರವರಿಂದ ಪ್ರಾರಂಭಿಸಲ್ಪಟ್ಟಿತು "Safety Volve" ಎಂಬುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸಂಬಂಧಪಟ್ಟಿದೆ.  ಇದರ ಮೊದಲ ಸಮ್ಮೇಳನವು ಬಾಂಬೆಯಲ್ಲಿ ಡಬ್ಲ್ಯೂ.ಸಿ.ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ಲಾರ್ಡ್ ಡರ್ಫಿನ್ ವೈಸ್ರಾಯ್ ಕಾಲದಲ್ಲಿ ಆಯಿತು. ಈ ಸಮ್ಮೇಳನಕ್ಕೆ 72 ಜನ ಪ್ರತಿನಿಧಿಗಳು ಆಗಮಿಸಿದ್ದರು. 1907ರ ಸೂರತ್ ಅಧಿವೇಷಣದಲ್ಲಿ ಸೌಮ್ಯವಾದಿಗಳು ಮತ್ತು ಉಗ್ರಗಾಮಿಗಳೆಂದು ಇಬ್ಬಾಗವಾಯಿತು.  ಉಗ್ರಗಾಮಿಗಳ ಗುಂಪಿನಲ್ಲಿ ಲಾಲ್, ಬಾಲ್ ಪಾಲ್ ಎಂದು ಹೆಸರಾಗಿದ್ದ ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್ ಪ್ರಮುಖವಾಗಿದ್ದರು ಇವರ ಅಧ್ಯಕ್ಷತೆಯನ್ನು ಅರವಿಂದೋ ಘೋಷ್ ವಹಿಸಿದ್ದರು.  ಇದರ ಮೊದಲ ಮುಸ್ಲಿಂ ಅಧ್ಯಕ್ಷರು ಬಹ್ರುದ್ದೀನ್ ತಯ್ಯಬ್ಜಿ.  ಇದರ ಮೊದಲ ಮಹಿಳಾ ಅಧ್ಯಕ್ಷರು ಆನಿಬೆಸೆಂಟ್.  1929ರ ಲಾಹೋರ್ ಅಧಿವೇಷಣದಲ್ಲಿ ಜವಾಹರ್ ಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ಪೂರ್ಣಸ್ವರಾಜ ಘೋಷಣೆಯನ್ನು ಕೈಗೊಳ್ಳಲಾಯಿತು.  1931ರ ಕರಾಚಿ ಅಧಿವೇಷಣದಲ್ಲಿ ವಲ್ಲಭಬಾಯಿ ಪಾಟೀಲರ ಅಧ್ಯಕ್ಷತೆಯಲ್ಲಿ ಮೂಲಭೂತಹಕ್ಕು ಮತ್ತು ರಾಷ್ಟ್ರೀಯ ವಿತ್ತ ಕಾರ್ಯಕ್ರಮದ ನಿರ್ಣಯ ತೆಗೆದುಕೊಳ್ಳಲಾಯಿತು.  1938 ರ ಹರಿಪುರ ಅಧಿವೇಷಣದಲ್ಲಿ ಸುಭಾಷ್ ಚಂದ್ರ ಬೋಸರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ಸ್ಥಾಪಿತವಾಯಿತು ಮತ್ತು 1939ರಲ್ಲಿ ತ್ರಿಪುರ ಅಧಿವೇಷಣದಲ್ಲಿ ಬೋಸರು ಪುನ: ಆಯ್ಕೆಯಾದಾಗ ಗಾಂಧೀಜಿಯವರು ಅಸಮದಾನಗೊಂಡಿದ್ದರಿಂದ ಬೋಸರು ರಾಜಿನಾಮೆನೀಡಿದರು, ಅವರ ಜಾಗದಲ್ಲಿ ರಾಜೇಂದ್ರ ಪ್ರಸಾದರು ಅಧ್ಯಕ್ಷತೆ ವಹಿಸಿದ್ದರು.  1906 ಕಲ್ಕತ್ತಾ ಅಧಿವೇಷಣದಲ್ಲಿ ಸ್ವರಾಜ್ ಅಂದರೆ ಸಂಪೂರ್ಣ ಸ್ವಸರ್ಕಾರವು ಭಾರತೀಯರ ಗುರಿಎಂದು ನಿರ್ಣಯ ಅಂಗೀಕರಿಸಲಾಯಿತು.

ಬಂಗಾಳದ ವಿಭಜನೆ:  16-10-1905ರಂದು ಲಾರ್ಡ್ ಕರ್ಜನ್ ಕಾಲದಲ್ಲಿ ರಾಷ್ಟ್ರೀಯ ಚಳುವಳಿಯನ್ನು ಹತ್ತಿಕ್ಕಲು ವಿಭಜಿಸಲಾಯಿತು.  ನಂತರ ರಾಷ್ಟ್ರಪ್ರೇಮಿಗಳ ತೀವ್ರ ಒತ್ತಡದಿಂದ 1911ರಲ್ಲಿ ಮತ್ತೆ ಒಂದುಗೂಡಿಸಲಾಯಿತು.


ಸ್ವದೇಶಿ ಚಳುವಳಿ: 1905ರಲ್ಲಿ ಬನಾರಸ್ ಅಧಿವೇಷಣದಲ್ಲಿ ಮೊದಲಬಾರಿಗೆ ಕರೆನೀಡಲಾಯಿತು.  ಈ ಕರೆಯ ಪ್ರಕಾರ ಬ್ರಿಟೀಷರ ವಸ್ತುಗಳನ್ನು ಮತ್ತು ಬಟ್ಟೆಗಳನ್ನು ಉಪಯೋಗಿಸದಂತೆ ಮತ್ತು ಸುಡುವಂತೆ ಪ್ರತಿಜ್ಞೆ ಕೈಗೊಳ್ಳಲಾಯಿತು. 

ಮುಸ್ಲಿಂ ಲೀಗ್ ಇದು ಅಗಾಖಾನ್ ರವರ ಅಧ್ಯಕ್ಷತೆಯಲ್ಲಿ 1906ರಲ್ಲಿ ಪ್ರಾರಂಭಿಸಲಾಯಿತು.  ಇದರ ಪ್ರಕಾರ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆಗೆ ಆದೇಶಿಸಲಾಯಿತು. 

ಗದ್ದಾರ್ ಪಕ್ಷ ಇದು 1913ರಲ್ಲಿ ಲಾಲ ಹರದಯಾಳ್, ತಾರಕನಾಥ್ ದಾಸ್ ಮತ್ತು ಸೋಹನ್ ಸಿಂಗರಿಂದ ಪ್ರಾರಂಭವಾಯಿತು ಇದರ ಮುಖ್ಯಕಛೇರಿಯು ಸ್ಯಾನ್ ಫ್ರಾನ್ಸಿಸ್ಕೋದಲ್ಲಿತ್ತು. 
ಹೋಂ ರೂಲ್ ಚಳುವಳಿ - ತಿಲಕರು ಮಾಂಡಲೆ ಜೈಲಿನಿಂದ ಹಿಂತಿರುಗಿದ ನಂತರ 1916ರಲ್ಲಿ ಆನಿಬೆಸಂಟರೊಡಗೂಡಿ ಹೋಂರೂಲ್ ಚಳುವಳಿಯನ್ನು ಸ್ಥಾಪಿಸಿದರು ಇದರ ಮುಖ್ಯ ಉದ್ದೇಶ ಬ್ರಿಟೀಷರಿಂದ ಸಂಪೂರ್ಣ ಆಡಳಿತವನ್ನು ಕಿತ್ತುಕೊಂಡು ದೇಶೀಯವಾಗಿ ಆಡಳಿತ ನೆಡೆಸುವುದಾಗಿತ್ತು.  ಈ ಚಳುವಳಿಯಲ್ಲಿ ತಿಲಕರು ಸ್ವರಾಜ್ಯ ನನ್ನ ಜನ್ಮಸಿದ್ದಹಕ್ಕು ಇದನ್ನು ಪಡೆದೇ ತೀರುತ್ತೇನೆ ಎಂಬ ಘೋಷಣೆಯನ್ನು ಮಾಡಿದರು. 
ಲಕ್ನೋ ಒಪ್ಪಂದ 1916ರಲ್ಲಿ ನೆಡೆದು ಇದು ಟರ್ಕಿಯ ರಾಜನ ಮೇಲೆ ಬ್ರಿಟೀಷರು ಹೂಡಿದ ಯುದ್ಧದ ವಿರುದ್ಧವಾಗಿದ್ದಿತು. 
ಆಗಸ್ಟ್ ಘೋಷಣೆ: 1917ರಲ್ಲಿ ಬ್ರಿಟೀಷರಿಂದ ಘೋಷಿಸಲ್ಪಟ್ಟು ಇದರ ಪ್ರಕಾರ ಬ್ರಿಟೀಷ್ ಆಡಳಿತದಲ್ಲಿ ಭಾರತೀಯರನ್ನು ಹೆಚ್ಚಾಗಿ ಸೇರಿಸಿಕೊಳ್ಳುವುದಾಗಿತ್ತು. 

ರೌಲತ್ ಕಾಯ್ದೆ ಇದು 18-3-1919 ರಲ್ಲಿ ಜಾರಿಯಾಗಿ ಇದರ ಪ್ರಕಾರ ಬ್ರಿಟೀಷರಿಗೆ ಅನುಮಾನ ಬಂದ ವ್ಯಕ್ತಿಯನ್ನು ದೇಶದ್ರೋಹದ ಆಪಾದನೆಯ ಮೇಲೆ ಯಾವುದೇ ವಿಚಾರಣೆಯಿಲ್ಲದೆ 2 ವರ್ಷಗಳವರೆಗೆ ಜೈಲಿನ ಶಿಕ್ಷೆಯನ್ನು ನೀಡಬಹುದಾಗಿತ್ತು.  ಮುಂದೆ ಈ ಕಾಯ್ದೆಯು ಗಾಂಧೀಜಿಯವರಿಗೆ ಅಸಹಕಾರ ಚಳುವಳಿ ನಡೆಸಲು ಕಾರಣವಾಯಿತು.
ಜಲಿಯನ್ ವಾಲಾಬಾಗ್ ದುರಂತ  ಇದು 13-4-1919ರಲ್ಲಿ ನಡೆಯಿತು ಇದಕ್ಕೆ ಕಾರಣ ಪಂಜಾಬಿನಲ್ಲಿ ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುತಿದ್ದಾಗ ಬ್ರಿಟೀಷರು ಡಾ|| ಕಿಚ್ಲು & ಸತ್ಯಪಾಲ್ ಅವರನ್ನು ಬಂಧಿಸಿದರು ಇದರ ವಿರುದ್ಧ ಜನರು ಜಲಿಯನ್ ವಾಲಾಬಾಗ್ ನಲ್ಲಿ ಸಭೆ ಸೇರಿದಾಗ ಆ ಸಭೆಯನ್ನು ಹತ್ತಿಕ್ಕಲು ಜನರಲ್ ಓ ಡಯರ್ ನನ್ನು ನೇಮಿಸಲಾಯಿತು ಇವನು ಆ ಜನರಿಗೆ ಯಾವುದೇ ಆದೇಶ ನೀಡದೆ ಬೇಕಾಬೆಟ್ಟಿ ಗುಂಡುಹಾರಿಸಿದಾಗ ಸಭೆ ಸೇರಿದ್ದ ನೂರಾರು ಜನರು ಹತ್ಯೆಯಾದರು ಮತ್ತು ಸಾವಿರಾರು ಜನರು ಗಾಯಾಳುಗಳಾದರು. ಈ ಘಟನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳಾದಾಗ ಬ್ರಿಟೀಷರು ಇದರ ವಿಚಾರಣೆಗಾಗಿ ಹಂಟರ್ ಆಯೋಗವನ್ನು ನೇಮಿಸಿದರು.  ಇದನ್ನು ಪ್ರತಿಭಟಿಸಿ ರವೀಂದ್ರನಾಥ ಟ್ಯಾಗೂರರು ತಮಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು. 
ಈ ಘಟನೆಗೆ ಪ್ರತಿಕಾರವಾಗಿ ಸರ್ದಾರ್ ಉಧಮ್ ಸಿಂಗರು ಲಂಡನ್ನಿನಲ್ಲಿದ್ದ ಜನರಲ್ ಓ ಡಯರ್ ನನ್ನು ಹುಡುಕಿಕೊಂಡು ಹೋಗಿ ಲಂಡನ್ನಿನಲ್ಲಿ ಹತ್ಯೆಗೈದರು.

ಕಿಲಾಫತ್ ಚಳುವಳಿ 1920 ರಲ್ಲಿ ಮೊಹಮ್ಮದ್ದ ಆಲಿ ಮತ್ತು ಶೌಕತ್ ಆಲಿ ಅವರಿಂದ ಪ್ರಾರಂಭವಾಯಿತು.
ಅಸಹಕಾರ ಚಳುವಳಿ ಸೆಪ್ಟೆಂಬರ್ 1920 ಇದು ರೌಲತ್ ಕಾಯ್ದೆ ಮತ್ತು ಬ್ರಿಟೀಷರ ಧೋರಣೆಯ ವಿರುದ್ಧ ಗಾಂಧೀಜಿಯವರು ಬ್ರಿಟೀಷ್ ಸರ್ಕಾರದ ವಿರುದ್ಧ ನೀಡಿದ ಕರೆಯಾಗಿತ್ತು ಇದರ ಪ್ರಕಾರ ಎಲ್ಲಾ ಭಾರತೀಯರಿಗೆ ಬ್ರಿಟೀಷರು ನೀಡಿದ್ದ ಪದಕ ಮತ್ತು ಬಿರುದುಗಳನ್ನು ವಾಪಸ್ ನೀಡುವುದು, ಸರ್ಕಾರದಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಭಾರತೀಯರು ರಾಜಿನಾಮೆ ನೀಡುವುದು, ಕೋರ್ಟು ಕಛೇರಿಗಳಿಗೆ ಬಹಿಷ್ಕಾರ ಹಾಕುವುದು, ಸೇನೆಯ ಭಾರತೀಯರು ಸೇನೆ ಬಿಟ್ಟುಬರುವುದು ಮತ್ತು ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.  ಮುಂದೆ ಚೌರಿ ಚೌರ ಘಟನೆಯ ನಂತರ ಈ ಚಳುವಳಿಯನ್ನು ಹಿಂತೆಗೆದುಕೊಳ್ಳಲಾಯಿತು.

ಚೌರಿ-ಚೌರ ಘಟನೆ 1922ರಲ್ಲಿ ಗೋರಖ್ ಪುರದ ಚೌರಿ-ಚೌರ ಎಂಬಲ್ಲಿ  ಚಳುವಳಿಯಲ್ಲಿ ಭಾಗವಹಿಸಿದ್ದವರಮೇಲೆ ಪೊಲೀಸರು ವಿನಾಕಾರಣ ಹೊಡೆದ ಪರಿಣಾಮ ಚಳುವಳಿಗಾರರು ಅಲ್ಲಿದ್ದ ಪೊಲೀಸರನ್ನು ಕೂಡಿಹಾಕಿ ಸುಟ್ಟುಬಿಟ್ಟರು ಇದರ ಪರಿಣಾಮವಾಹಿ ಗಾಂಧೀಜಿಯವರು ತಮ್ಮ ಅಹಿಂಸಾ ಚಳುವಳಿಗೆ ಧಕ್ಕೆ ಬಂದಿತೆಂದು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು
ಸ್ವರಾಜ್ ಪಕ್ಷ 1923ರಲ್ಲಿ ಮೋತಿಲಾಲ್ ನೆಹರು, ಚಿತ್ತರಂಜನ್ ದಾಸ್ ಮತ್ತು ಕೇಲ್ಕರ್ ರವರು ಬ್ರಿಟೀಷ್ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ಸ್ಪರ್ದಿಸಲು ಸ್ಥಾಪಿಸಿದರು

ಸೈಮನ್ ಆಯೋಗ ಭಾರತದಲ್ಲಿ ರಾಜಕೀಯ ಪರಿಸ್ಥಿಯನ್ನು ಅವಲೋಕಿಸಲು ಬ್ರಿಟೀಷ್ ಸರ್ಕಾರವು 1927ರಲ್ಲಿ  ಜಾನ್ ಸೈಮನ್ ರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ ಭಾರತಕ್ಕೆ ಕಳುಹಿಸಿಕೊಟ್ಟಿತು ಆ ಆಯೋಗದಲ್ಲಿ ಭಾರತೀಯರಾರು ಇಲ್ಲದಿದ್ದರಿಂದ ಎಲ್ಲಾ ಭಾರತೀಯರು ಇದನ್ನು ಪ್ರತಿಭಟಿಸಿದರು.


ನೆಹರುವರದಿ 1928ರಲ್ಲಿ ಸೈಮನ್ ಆಯೋಗವನ್ನು ಪ್ರತಿಭಟಿಸಿದನಂತರ ಭಾರತದಲ್ಲಿ ಸ್ವಂತವಾಗಿಯೇ ಸಂವಿಧಾನವನ್ನು ರಚಿಸಲು ಮೊತಿಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ವರದಿಯನ್ನು ಸಲ್ಲಿಸಲಾಯಿತು ಈ ವರದಿಯು ನೆಹರು ವರದಿಯೆಂದು ಪ್ರಖ್ಯಾತವಾಗಿದೆ

ಲಾಹೋರ್ ಸಮಾವೇಶ  19-12-1929 ರಲ್ಲಿ ಜವಾಹರ್ ಲಾಲ್ ನೆಹರು ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಷಣ ನೆಡೆಯಿತು. ಈ ಸಮಾವೇಶದಲ್ಲಿ ನೆಹರುರವರು 26-1-1930ರಂದು ಪೂರ್ಣಸ್ವರಾಜ್ಯ ಘೋಷಣೆಮಾಡಿದರು.  31-12-1929ರಂದು ಈ ಸಮಾವೇಶದಲ್ಲಿ ಮೊದಲ ಬಾರಿಗೆ ತ್ರಿಮರ್ಣ ಧ್ವಜ ಹಾರಿಸಲಾಯಿತು ಲಾಹೋರ್ ನ ರಾವಿ ನದಿಯ ದಡದಲ್ಲಿ ಮತ್ತು 26-1-1930ರಂದು ಸ್ವತಂತ್ರದಿನ ಎಂದು ಘೋಷಿಸಲಾಯಿತು.

ಭಾರತದ ಹೊರಗಿನ ಸ್ವತಂತ್ರ ಕ್ರಾಂತಿಕಾರಿ ಸಂಘಗಳು


ಇಂಡಿಯಾ ಹೌಸ್ ಇದನ್ನು ಸ್ವಾಮಿ ಕೃಷ್ಣ ವರ್ಮರು ಲಂಡನ್ನಿನಲ್ಲಿ ಸ್ಥಾಪಿಸಿದರು,  ಅಭಿನವ ಭಾರತ ಇದನ್ನು ವಿ.ಡಿ.ಸಾವರ್ಕರ್ ರವರು 1906ರಲ್ಲಿ ಲಂಡನ್ನಿನಲ್ಲಿ ಸ್ಥಾಪಿಸಿದರು.
ಗದ್ದರ್ ಪಾರ್ಟಿ ಇದನ್ನು 1913ರಲ್ಲಿ ಲಾಲಾ ಹರದಯಾಳ್ ಮತ್ತು ತಾರಕ್ ನಾಥ್ ದಾಸ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ಥಾಪಿಸಿದರು.  ಲೀಗ್ ಮತ್ತು ಗೌರ್ನಮೆಂಟ್ ಇಂಡಿಯನ್ ಇಂಡಿಪೆಂಡೆನ್ಸ್ ಇದನ್ನು 1942 ರಲ್ಲಿ ರಾಸ್ ಬಿಹಾರಿ ಬೋಸರು ಟೋಕಿಯೋದಲ್ಲಿ ಸ್ಥಾಪಿಸಿದರು, ಲೀಗ್ ಆಫ್ ಇಂಡಿಯನ್ ನ್ಯಾಷನಲ್ ಆರ್ಮಿ ಇದನ್ನು 1942ರಲ್ಲಿ ರಾಸ್ ಬಿಹಾರಿ ಬೋಸರು ಟೋಕಿಯೋದಲ್ಲಿ ಸ್ಥಾಪಿಸಿದರು.
 ಇಂಡಿಯನ್ ನ್ಯಾಷನಲ್ ಆರ್ಮಿ ಇದು ಸುಭಾಷ್ ಚಂದ್ರ ಭೋಸರಿಂದ ಸ್ಥಾಪಿತವಾಗಿದ್ದು ಇದರ ಪ್ರಧಾನ ಕಛೇರಿಗಳು ರಂಗೂನ್ ಮತ್ತು ಸಿಂಗಪೂರದಲ್ಲಿತ್ತು ಇದರ ಮಹಿಳಾ ಘಟಕದ ಹೆಸರು ಝಾನ್ಸಿ ರೆಜಿಮೆಂಟ್ ಇದರ ಕಮ್ಯಾಂಡರ್ ಲಕ್ಷ್ಮಿ ಸೆಹಗಲ್ 
ಸ್ವತಂತ್ರ ಪೂರ್ವ ಭಾರತದ ಪ್ರಮುಖ ಪತ್ರಿಕೆ ಮತ್ತು ಸಂಪಾದಕರು
ಬಂಗಾಳಗೆಜೆಟ್ ಇದು ಭಾರತದ ಮೊದಲ ಸಮಾಚಾರ ಪತ್ರಿಕೆಯಾಗಿದ್ದು ಇದರ ಸಂಪಾಕರು ಹಿಕಿ.  ಕೇಸರಿ ಮತ್ತು ಮರಾಠ ಪತ್ರಿಕೆಗಳ ಸಂಪಾದಕರು ಬಾಲಗಂಗಾಧರನಾಥ ತಿಲಕರು,  ವಂದೇ ಮಾತರಂ ಪತ್ರಿಕೆಯ ಸಂಪಾದಕರು ಅರವಿಂದೋ ಘೋಷ್,  ಹಿಂದು ಪತ್ರಿಕೆಯ ಸಂಪಾದಕರು ರಾಘವಾಚಾರ್ಯ & ಅಯ್ಯರ್,  ಸೋಮ್ ಪ್ರಕಾಶ ಪತ್ರಿಕೆಯ ಸಂಪಾದಕರು ಈಶ್ವರಚಂದ್ರ ವಿದ್ಯಾಸಾಗರ,  ಹಿಂದುಸ್ಥಾನ್ ಪತ್ರಿಕೆಯ ಸಂಪಾದಕರು ಮಾಳವೀಯ,  ಮೂಕನಾಯಕ್ ಪತ್ರಿಕೆಯ ಸಂಫಾದಕರು ಡಾ|| ಬಿ.ಆರ್.ಅಂಬೇಡ್ಕರ್,  ಅಲ್ ಹಿಲಾಲ್ ಪತ್ರಿಕೆಯ ಸಂಫಾದಕರು ಅಬ್ದುಲ್ ಕಲಾಂ ಅಜಾದ್,  ಇಂಡಿಪೆಂಡೆಂಟ್ ಪತ್ರಿಕೆಯ ಸಂಪಾದಕರು ಮೊತಿಲಾಲ್ ನೆಹರು,   ಪಂಜಾಬಿ ಪತ್ರಿಕೆಯ ಸಂಪಾದಕರು ಲಾಲ ಲಜಪತರಾಯ್,  ನ್ಯೂ ಇಂಡಿಯಾ ಪತ್ರಿಕೆಯ ಸಂಪಾದಕರು ಆನಿಬೆಸೆಂಟ್,  ,  ಸೌಮತ್ ಕುಮಿದಿ ಮತ್ತು ಮೀರತ್ - ಉಲ್ - ಅಕ್ಬರ್ ಪತ್ರಿಕೆಯ ಸಂಪಾದಕರು ರಾಜಾ ರಾಮ ಮೊಹನರಾಯ್,  ಇಂಡಿಯನ್ ಮಿರರ್ ಪತ್ರಿಕೆಯ ಸಂಪಾದಕರು ದೇವೇಂದ್ರನಾಥ ಟ್ಯಾಗೂರ್,  ನವಜೀವನ, ಯಂಗ್ ಇಂಡಿಯಾ, ಹರಿಜನ ಪತ್ರಿಕೆಯ ಸಂಪಾದಕರು ಗಾಂದೀಜಿ,  ಪ್ರಬುಧ್ಧ ಭಾರತ ಮತ್ತು ಉದ್ಬೋದನ ಪತ್ರಿಕೆಯ ಸಂಪಾದಕರು ಸ್ವಾಮಿ ವಿವೇಕಾನಂದ, 

ಪ್ರಮುಖ ಸ್ವತಂತ್ರ ಹೋರಾಟಗಾರರ ಲೇಖನಗಳು:
ಗುಲಾಮಗಿರಿ- ಜ್ಯೋತಿಬಾಪುಲೆ,  ಫಕ್ತೂನ್-ಖಾನ್ಅಬ್ದುಲ್ ಗಫರ್ ಖಾನ್,  ಎಕನಾಮಿಕ್ ಹಿಸ್ಟರ್ ಆಫ್ ಇಂಡಿಯಾ - ಆರ್.ಸಿ.ದತ್ತ್,  ಪಾತೇರ್ ಪಾಂಚಾಲಿ - ಬಿ.ಬಿ.ಬ್ಯಾನರ್ಜಿ,  ಎ ಗಿಫ್ಟ್ ಆಫ್ ಮನೋಥಿಸೀಸ್ - ರಾಜಾ ರಾಮ್ ಮೋಹನ್ ರಾಯ್,  ಆನಂದ ಮಠ ಮತ್ತು ಸೀತಾರಾಮ - ಬಂಕಿಮ ಚಂದ್ರ ಚಟರ್ಜಿ,  ಇಂಡಿಯನ್ ಸ್ಟ್ರಗಲ್ - ಸುಭಾಷ ಚಂದ್ರ ಭೋಸ್, ಪಾವರ್ಟಿ ಅಂಡ್ ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ - ದಾದಾ ಬಾಯಿ ನವರೋಜಿ,  ಅನ್ ಹ್ಯಾಪಿ ಇಂಡಿಯಾ - ಲಾಲಾ ಲಜಪತರಾಯ್,  ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ - ವಿ.ಡಿ.ಸಾವರ್ಕರ್,  ಇಂಡಿಯಾ ಡಿವೈಡೆಡ್ - ರಾಜೇಂದ್ರ ಪ್ರಸಾದ್,  ದಿ ಡಿಸ್ಕವರಿ ಆಫ್ ಇಂಡಿಯಾ, ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ, ಎ ಬಂಚ್ ಆಫ್ ಓಲ್ಡ್ ಲೆಟರ್ಸ್, ಇಂಡಿಪೆಂಡೆನ್ಸ್ ಅಂಡ್ ಆಫ್ಟರ್, ಇಂಡಿಯಾ ಅಂಡ್ ದಿ ವರ್ಲ್ಡ್  - ನೆಹರೂ,  ನೀಲ್ ದರ್ಪಣ್ - ದೀನಬಂಧುಮಿತ್ರ,  ಹಿಂದ್ ಸ್ವರಾಜ್ - ಎಂ,ಕೆ.ಗಾಂಧಿ,  ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡೂ ಅನ್ಟಚಬಲ್ಸ್ - ಡಾ|| ಅಂಬೇಡ್ಕರ್,  ಭಾರತದ ಆರ್ಥಶಾಸ್ತ್ರದ ಪ್ರಬಂಧಗಳು ಇದರ ಲೇಖಕರು ಎಂ.ಜಿ.ರಾನಡೆಆರ್ಕ್ಟಿಕ್ ಹೋಂ ಆಫ್ ಇಂಡಿಯಾ ಮತ್ತು ಗೀತರಹಸ್ಯ - ಬಾಲಗಂಗಾಧರ ತಿಲಕರು,  ಇಂಡಿಯಾ ವಿನ್ಸ್ ಫ್ರೀಡಂ ಇದು ವಿವಾದಾತ್ಮಕ ಲೇಖನವಾಗಿದ್ದು ಇದರ ಲೇಖಕರು ಮೌಲಾನ ಅಬ್ದುಲ್ ಕಲಾಂ ಅಜಾದ್, 

ಉಪ್ಪಿನ ಸತ್ಯಾಗ್ರಹ: 12-3-1930ರಂದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ (ಬ್ರಿಟೀಷ್ ಆಢಳಿತದ ದೌರ್ಜನ್ಯದ ವಿರುದ್ಧ ಸಾಂಕೇತಿಕವಾಗಿ) ಉಪ್ಪಿನ ಮೇಲೆ ವಿಧಿಸಿದ್ದ ಕರದ ವಿರುದ್ಧವಾಗಿ ಉಪ್ಪಿನ  ಸತ್ಯಾಗ್ರಹವನ್ನು ಆರಂಭಿಸಿದರು ಸುಮಾರು 78 ಜನ ಅನುಯಾಯಿಗಳೊಡನೆ ಸಬರಮತಿ ಆಶ್ರಮದಿಂದ ದಂಡಿಯ ಸಮುದ್ರ ತೀರದವರೆಗೆ ಸುಮಾರು 290 ದಿನಗಳ ಕಾಲ ಪಾದಯಾತ್ರೆಮಾಡಿ 6-4-1930ರಂದು ಸ್ವತ: ಉಪ್ಪನ್ನು ತಯಾರಿಸುವ ಮೂಲಕ ಬ್ರಿಟೀಷರ ಕಾನೂನನ್ನು ಬಹಿಷ್ಕರಿಸಿ ನಾಗರೀಕ ಅಸಹಕಾರ ಚಳುವಳಿಗೆ ನಾಂದಿಹಾಡಿದರು.

ಮೊದಲ ದುಂಡು ಮೇಜಿನ ಸಭೆ 12-11-1930ರಂದು ಸೈಮನ್ ಕಮಿಷನ್ನಿನ ವಿಚಾರವಾಗಿ ಲಂಡನ್ನಿನಲ್ಲಿ ನೆಡೆಯಿತು,  ಎರಡನೆ ದುಂಡು ಮೇಜಿನ ಸಭೆ 1931 ರಲ್ಲಿ ಗಾಂಧೀಜಿಯವರು ಮತ್ತು ರಾಮ್ಸೆ ಮ್ಯಾಕ್ ಡೊನಾಲ್ಡ್  ಉಪಸ್ಥಿಯಲ್ಲಿ ಲಂಡನ್ನಿನಲ್ಲಿ ನೆಡೆಯಿತು ಈ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಚುನಾವಣೆ ನೆಡೆಸಲು ಆಗ್ರಹಿಸಲಾಯಿತು ಇದರಿಂದ ಸಭೆಯು ಯಶಸ್ವಿಯಾಗಲಿಲ್ಲ.  ಸಭೆಮುಗಿಸಿಕೊಂಡು ಬಂದ ಗಾಂಧೀಜಿಯವರು 1932ರಲ್ಲಿ ಅಸಹಕಾರ ಚಳುವಳಿಗೆ ಕರೆನೀಡಿದರು ಈ ಚಳುವಳಿಯು ನ್ಯಾಯಬಾಹಿರವೆಂದು ಬ್ರಿಟೀಷರು ಗಾಂಧೀಜಿಯವರನ್ನು ಯರವಾದ ಜೈಲಿಗೆ ಹಾಕಿದರು.  ನಂತರ ಬ್ರಿಟೀಷರ ಕುಮ್ಮಕ್ಕಿನಿಂದ ದೇಶದಲ್ಲಿ ಜನಾಂಗೀಯ ಗಲಬೆಯುಂಟಾಗಿ ಅಪಾರ ಸಾವುನೋವು ಉಂಟಾದ್ದರಿಂದ ಗಾಂಧೀಜಿಯವರು ಯರವಾಡ ಜೈಲಿನಲ್ಲಿ ಆಮರಣಾಂತ ಉಪವಾಸ ಕೈಗೊಂಡರು.  ಮೂರನೆ ದುಂಡುಮೇಜಿನ ಸಭೆ 1932ರಲ್ಲಿ ನೆಡಯಿತು ಇದು ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935 ಜಾರಿಯಾಗಲು ದಾರಿಯಾಯಿತು. ಡಾ|| ಬಿ.ಆರ್. ಅಂಬೇಡ್ಕರರು ಮೂರು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ ಏಕೈಕ ಸದಸ್ಯರಾಗಿದ್ದರು.

ದಾದಾಬಾಯಿ ನವರೋಜಿಯವರು ಹೌಸ್ ಆಫ್ ಕಾಮನ್ಸ್ ನ ಸದಸ್ಯರಾದ ಮೊದಲ ಭಾರತೀಯರು,  ಖುದೈ ಖಿದ್ಮತ್ ದಾರ್ ಅಂದರ ಕೆಂಪಂಗಿ ದಳವನ್ನು ಪ್ರಾರಂಭಿಸಿದವರು ಖಾನ್ ಅಬ್ದುಲ್ ಗಫಾರ್ ಖಾನ್, 

ಪ್ರಮುಖ ಸ್ವತಂತ್ರ ಹೋರಾಟಗಾರರ ಘೊಷಣೆಗಳು
ಸತ್ಯಮೇವ ಜಯತೆ : ಮದನ ಮೋಹನ ಮಾಳವೀಯ,  ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುವೆ - ಬಾಲಗಂಗಾಧರ ತಿಲಕರು,  ಜೈ ಜವಾನ್ ಜೈ ಕಿಸಾನ್ ಲಾಲ್ ಬಹದ್ದೂರ್ ಶಾಸ್ತ್ರಿ,  ನೀವು ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ, ದಿಲ್ಲಿ ಚಲೊ  ಮತ್ತು ಜೈಹಿಂದ್ - ಸುಭಾಷ್ ಚಂದ್ರ ಬೋಸ್,  ಮಾಡು ಇಲ್ಲವೇ ಮಡಿ - ಗಾಂಧೀಜಿ,  ಸೆಕ್ಯೂರ್ ದಿ ಫ್ರೀಡಂ ಆಫ್ ಇಂಡಿಯಾ ಅಟ್ ಎನಿ ಕಾಸ್ಟ್ - ಅರವಿಂದೋ ಘೋಷ್, ಇನ್ಕಿಲಾಬ್ ಜಿಂದಾಬಾದ್ - ಭಗತ್ ಸಿಂಗ್,

ಕ್ರಿಪ್ಸ್ ನಿಯೋಗ: 1939 ರಿಂದ 1945ರ ವರೆಗೆ ನೆಡೆದ ಎರಡನೇ ಮಹಾಯುದ್ಧದಲ್ಲಿ ಶತೃಸೈನ್ಯದ ಎದುರು ಬ್ರಿಟೀಷರ ಪ್ರಾಬಲ್ಯ ಕಡಿಮೆಯಾದಾಗ ಬ್ರಿಟೀಷರು ತಮ್ಮ ಪರ ಯುದ್ಧದಲ್ಲಿ ಭಾರತೀಯರು ಭಾಗವಹಿಸುವಂತೆ ಪ್ರೇರೇಪಿಸಿ ಅದಕ್ಕೆ ಪ್ರತಿಯಾಗಿ ಯುಧ್ಧ ಮುಗಿದ ನಂತರ  ಭಾರತೀಯರಿಗೆ ಸಂಪೂರ್ಣ ರಾಷ್ಟ್ರದ ಪ್ರಭುತ್ವವನ್ನು ನೀಡುತ್ತೇವೆ ಎಂದು ತಿಳಿಸಿ ಆ ಒಪ್ಪಂದಕ್ಕಾಗಿ 1942ರಲ್ಲಿ ಹೌಸ್ ಆಫ್ ಕಾಮನ್ಸ್ ಅಧ್ಯಕ್ಷರಾಗಿದ್ದ ಸ್ಟಾಫರ್ಡ್ ಕ್ರಿಪ್ಸ್ ನಿಯೋಗವನ್ನು ಭಾರತಕ್ಕೆ ಕಳುಹಿಸಿತುಈ ನಿಯೋಗವು ಬ್ರಿಟೀಷರ ಅಧೀನದಲ್ಲಿ ಕೆಲವು ಭಾಗದಲ್ಲಿ ಮಾತ್ರ ಅಂದರೆ ಮಿಲಿಟರಿ ಮುಂತಾದ ಮುಖ್ಯ ಇಲಾಖೆಗಳು ಬ್ರಿಟೀಷರ ಅಧೀನದಲ್ಲಿದ್ದು ಕೆಲವನ್ನು ಮಾತ್ರ ಭಾರತೀಯರಿಗೆ ಸ್ವತಂತ್ರ ನೀಡಲು ಒಪ್ಪಿತು ಮತ್ತು ಭಾರತದ ಸಂವಿಧಾನವು ಸಂಫೂರ್ಣ ಬ್ರಟೀಷರಿಂದ ಮಾಡಲ್ಪಟ್ಟಿರಬೇಕೆಂದು ಹೇಳಿತು ಈ ಒಪ್ಪಂದವನ್ನು ಭಾರತೀಯರು ತೀವ್ರವಾಗಿ ವಿರೋಧಿಸಿದರು ಮತ್ತು ಗಾಂಧೀಜಿಯವರು ಇದನ್ನು ಪೋಸ್ಟ್ ಡೇಟೆಡ್ ಚೆಕ್ ಇನ್ ಎ ಕ್ರಾಷಿಂಗ್ ಬ್ಯಾಂಕ್ ಎಂದು ಟೀಕಿಸಿದರು ಮತ್ತು ಇದರ ವಿರುದ್ಧವಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು.


ಕ್ವಿಟ್ ಇಂಡಿಯಾ ಚಳುವಳಿ : ಕ್ರಿಪ್ಸ್ ನಿಯೋಗದ ವೈಫಲ್ಯದ ನಂತರ ಬ್ರಿಟೀಷರ ನೀತಿಗೆ ವಿರುದ್ಧವಾಗಿ 08-08-1942ರಲ್ಲಿ ಗಾಂಧೀಜಿಯವರು ಬಾಂಬೆಯಲ್ಲಿ ಬ್ರಿಟೀಷರೆ ಭಾರತಬಿಟ್ಟು ತೊಲಗಿ ಚಳುವಳಿಗೆ ಕರೆನೀಡಿದರು.  ಈ ಚಳುವಳಿಯಲ್ಲಿ ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಘೋಷಣೆಮಾಡಿದರು ಇದಕ್ಕೆ ಪ್ರತಿಯಾಗಿ ಬ್ರಿಟೀಷರು ಗಾಂಧೀಜಿಯವರನ್ನು ಅಗಾಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿಟ್ಟರು ನಂತರ  ಜೆ.ಪಿ.ನಾರಾಯಣ್, ಲೋಹಿಯಾ ಮತ್ತು ಅರುಣಾ ಆಸಿಫ್ ಆಲಿಯವರು ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು, ಈ ಚಳುವಳಿಯು ಕಾಂಗ್ರೆಸ್ ರೇಡಿಯೋದಲ್ಲಿ ವಾಚಕಿಯಾಗಿದ್ದ ಉಷಾಮೆಹ್ತಾರವರಿಂದ ತೀವ್ರ ಸ್ವರೂಪ ಪಡೆಯಲು ಸಹಕಾರಿಯಾಯಿತು. ಆದರೆ ಚಳುವಳಿಯ ನೇತೃತ್ವ ವಹಿಸಬೇಕಾಗಿದ್ದ ನಾಯಕರಲ್ಲಿ ಹೆಚ್ಚಿನವರು ಜೈಲಿನಲ್ಲಿದ್ದಿದ್ದರಿಂದ ನಾಯಕತ್ವದ ಕೊರತೆಯಿಂದಾಗಿ ಚಳುವಳಿಗೆ ಹಿನ್ನೆಡೆಯಾಯಿತು.

ವೇವೆಲ್ ಪ್ಲಾನ್ 1945 ನಲ್ಲಿ,  ಕ್ಯಾಬಿನೆಟ್ ಮಿಷನ್ ಪ್ಲಾನ್ 1946ನಲ್ಲಿ,  ಮೌಂಟ್ ಬ್ಯಾಟನ್ ಪ್ಲಾನ್ 1947ರಲ್ಲಿ,  ರೆಗ್ಯುಲೇಟಿಂಗ್ ಆಕ್ಟ್ 1773ರಲ್ಲಿ,  ಪಿಟ್ಸ್ ಇಂಡಿಯಾ ಆಕ್ಟ್ 1784ರಲ್ಲಿ,  ಇಂಡಿಯನ್ ಕೌನ್ಸಿಲ್ ಆಕ್ಟ್ 1861ರಲ್ಲಿ,  ಮಾರ್ಲೆ-ಮಿಂಟೋ ಆಕ್ಟ್ 1909ರಲ್ಲಿ,  ಮಾಂಟೆಗೊ-ಚೆಲ್ಮ್ಸ್ ಫೋರ್ಡ್ ರೀಫಾರ್ಮ್ಸ್ 1919ರಲ್ಲಿ,  ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935ರಲ್ಲಿ, ಶಾರದ ಆಕ್ಟ್ - 1929ರಲ್ಲಿ ಜಾರಿಯಾಯಿತು
ನಮ್ಮನ್ನು ಜೀವಂತವಾಗಿರಿಸಿರುವ ಆಮ್ಲಜನಕವು ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ.  ಇದು ಬರುವುದು

ಎ) ಇಂಗಾಲದ ಡೈ ಆಕ್ಸೈಡ್ ನಿಂದ,  ಬಿ) ಮಣ್ಣಿನಿಂದ ತೆಗೆಯಲ್ಪಟ್ಟ ಇಂಗಾಲದಿಂದ,  ಸಿ) ಖನಿಜದ ಆಕ್ಸೈಡ್ ನಿಂದ,  ಡಿ) ನೀರಿನಿಂದ


ಸಾಮಾನ್ಯ ಬಳಕೆಯ ಸಾಂಬಾರ ವಸ್ತು ಲವಂಗವು ದೊರೆಯುವುದು
ಎ) ಬೇರಿನಿಂದ,  ಬಿ) ಕಾಂಡದಿಂದ,  ಸಿ) ಮೊಗ್ಗಿನಿಂದ,  ಡಿ) ಹಣ್ಣಿನಿಂದ


14 ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಕೆಳಗಿನವುಗಳಲ್ಲಿ ಅಗತ್ಯವಾಗಿರುವುದು
ಎ) ಸಸಾರಜನಕ,  ಬಿ) ಜೀವಸತ್ವ,  ಸಿ) ಕೊಬ್ಬು,  ಡಿ) ಹಾಲು, 


ಹೃದಯಘಾತವಾದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಪ್ರಥಮ ಚಿಕಿತ್ಸೆ
ಎ) ಬಾಯಿಯಿಂದ ಬಾಯಿಯ ಉಸಿರಾಟ,  ಬಿ) ಎದೆನೀವುವುದು,  ಸಿ) ವೈದ್ಯರನ್ನು ಕರೆಯುವುದು,  ಡಿ) ಇಂಜೆಕ್ಷನ್ ಕೊಡುವುದು


ಸಮುದ್ರ ನೀರಿನಿಂದ ಸ್ವಚ್ಛನೀರನ್ನು ಈ ಕ್ರಮದಿಂದ ಪಡೆಯಬಹುದು
ಎ) ಸೋಸುವಿಕೆ,  ಬಿ) ಭಟ್ಟಿಇಳಿಸುವಿಕೆ,  ಸಿ) ಆವಿಯಾಗುವಿಕೆ,  ಡಿ) ಭಾಗಶ: ಭಟ್ಟಿಇಳಿಸುವಿಕೆ


ಅಡುಗೆ ಸೋಡಾದ ರಾಸಾಯನಿಕ ಹೆಸರು
ಎ) ಕ್ಯಾಲ್ಶಿಯಂ ಫಾಸ್ಫೇಟ್,  ಬಿ) ಸೋಡಿಯಂ ಬೈ ಕಾರ್ಬೊನೇಟ್,  ಸಿ) ಸೋಡಿಯಂ ಕ್ಲೋರೈಡ್,  ಡಿ) ಬೇಕರ್ಸ್ ಈಸ್ಟ್


ಅಡುಗೆ ಅನಿಲ ವಿತರಕರು ವಿತರಿಸುವ ಸಿಲಿಂಡರಿನ ಅನಿಲದ ಸ್ವರೂಪ
ಎ) ದ್ರವ,  ಬಿ) ಅನಿಲ,  ಸಿ) ಘನ,  ಡಿ) ದ್ರಾವಣ


ಶರೀರದ ಭಾರವು
ಎ) ಭೂಮಿಯ ಎಲ್ಲಾ ಪ್ರದೇಶದಲ್ಲೂ ಒಂದೇ ಸಮನಾಗಿರುತ್ತದೆ,  ಬಿ) ದೃವಗಳಲ್ಲಿ ಹೆಚ್ಚಾಗಿರುತ್ತದೆ,  ಸಿ) ಭೂಮಧ್ಯ ರೇಖೆಯಲ್ಲಿ ಹೆಚ್ಚಾಗಿರುತ್ತದೆ,  ಡಿ)  ಸಮತಟ್ಟು ಪ್ರದೇಶಕ್ಕಿಂತ ಬೆಟ್ಟದ ಪ್ರದೇಶದಲ್ಲಿ ಹೆಚ್ಚಾಗಿರುತ್ತದೆ


ವಾಯು ಒತ್ತಡವನ್ನು ಅಳೆಯುವುದು
ಎ) ಹೈಡ್ರೋಮೀಟರ್,  ಬಿ) ಬ್ಯಾರೋಮೀಟರ್,  ಸಿ) ಹೈಗ್ರೋಮೀಟರ್,  ಡಿ) ಆಲ್ಟೀ ಮೀಟರ್


ಮೂರು ಪ್ರಾಥಮಿಕ ಬಣ್ನಗಳೆಂದರೆ
ಎ) ನೀಲಿ, ಹಸಿರು, ಕೆಂಪು,  ಬಿ) ನೀಲಿ ಹಳದಿ, ಕೆಂಪು,  ಸಿ) ಹಳದಿ, ಕಿತ್ತಳೆ,  ಕೆಂಪು,  ಡಿ) ನೇರಳೆ, ಬೂದು,  ನೀಲಿ


ಜಾವಾ ಮತ್ತು ಸುಮಾತ್ರ ಪ್ರದೇಶಗಳನ್ನು ಗೆದ್ದುಕೊಂಡ ಭಾರತವನ್ನಾಳಿದ ರಾಜನು ಯಾರು
ಎ) ರಾಜ ರಾಜ ಚೋಳ-1,  ಬಿ) ರಾಜೇಂದ್ರ ಚೋಳ-2,  ಸಿ) ಸಮುದ್ರ ಗುಪ್ತ,  ಡಿ) ವಿಕ್ರಮಾದಿತ್ಯ


ಹೊಯ್ಸಳ ರಾಜ್ಯವನ್ನು ಅಂತಿಮವಾಗಿ ವಶಪಡಿಸಿಕೊಂಡವರು ಯಾರು
ಎ) ಬಹಮನಿ ಸುಲ್ತಾನರು,  ಬಿ) ವಿಜಯನಗರ,  ಸಿ) ಪ್ರತಿಹಾರರು,  ಡಿ) ಪಲ್ಲವರು


1857ರ ದಂಗೆಯ ಸಂದರ್ಭದಲ್ಲಿ ಸ್ನೇಹಿತನ ಕುತಂತ್ರದಿಂದ ಬ್ರಿಟೀಷರಿಗೆ ಬಲಿಯಾದವರು
ಎ) ನಾನಾ ಸಾಹೇಬ್,  ಬಿ) ಕುನ್ವರ್ ಸಿಂಗ್,  ಸಿ) ಖಾನ್ ಬಹದ್ದೂರ್ ಖಾನ್,  ಡಿ) ತಾಂತ್ಯಾ ಟೋಪಿ


ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಪ್ರಥಮ ಮಹಿಳಾ ಅಧ್ಯಕ್ಷೆ
ಎ) ಕಸ್ತೂರಿಬಾ ಗಾಂಧಿ,  ಬಿ) ಆನಿಬೆಸೆಂಟ್,  ಸಿ) ಸರೋಜಿನಿ ನಾಯ್ಡು,  ಡಿ) ವಿಜಯಲಕ್ಷ್ಮಿ ಪಂಡಿತ್


1920ರಲ್ಲಿ ಅಸಹಕಾರ ಚಳುವಳಿಯನ್ನು ಹಿಂದೆ ಪಡೆದಿದ್ದು
ಎ) ಗಾಂಧೀಜಿಯವರ ಅನಾರೋಗ್ಯದ ಕಾರಣಕ್ಕೆ,  ಬಿ) ಇಂಡಿಯನ್ ನ್ಯಾಷನಲ್ ಕ್ರಾಂಗ್ರೆಸ್ ಅತಿರೇಕದ ಕಾರ್ಯನೀತಿಯನ್ನು ಅಳವಡಿಸಿಕೊಂಡಿದ್ದಕ್ಕೆ,  ಸಿ) ಸರ್ಕಾರದ ಉದ್ರಿಕ್ತ ಅಪೀಲಿನಿಂದ,  ಡಿ) ಚೌರಿಚೌರದಲ್ಲಿ ಭುಗಿಲೆದ್ದ ಹಿಂಸೆಯಿಂದಾಗಿ


1857ರ ಭಾರತದ ಪ್ರಪ್ರಥಮ ಸ್ವತಂತ್ರ ಹೋರಾಟದಲ್ಲಿ ಪ್ರಪ್ರಥಮ ಬಾರಿಗೆ ಗುಂಡು ಹಾರಿಸಿದ ಮುಖಂಡ
ಎ) ರಾಣಿ ಲಕ್ಷ್ಮಿಬಾಯಿ,  ಬಿ) ಭಕ್ತ್ ಖಾನ್,  ಸಿ) ಮಂಗಲ್ ಪಾಂಡೆ,  ಡಿ) ಶಿವಾಜಿ


ಭಾರತದ ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ ಎಂದು ಗುರುತಿಸಲ್ಪಟ್ಟವರು
ಎ) ಖಾನ್ ಅಬ್ದುಲ್ ಗಫರ್ ಖಾನ್,  ಬಿ) ರಾಜಗೋಪಾಲ ಚಾರಿ,  ಸಿ) ಲಾಲಾ ಲಜಪತರಾಯ್,  ಡಿ) ದಾದಾಬಾಯಿ ನವರೋಜಿ


ಡಬ್ಲ್ಯೂ.ಜಿ.ಗ್ರೇಸ್ ಅವರು ಭಾಗವಹಿಸಿರುವ ಕ್ರೀಡೆ
ಎ) ಹಾಕಿ,  ಬಿ) ಬಿಲಿಯರ್ಡ್ಸ್,   ಸಿ) ಕ್ರಿಕೇಟ್,  ಡಿ) ಗಾಲ್ಫ್


1854ರ ಸ್ ಚಾರ್ಲ್ಸ್ ವುಡ್ಸ್ ನಿರ್ಗಮನ ಪ್ರಮುಖವಾಗಿ ಸಂಬಂಧಿಸಿದ್ದು
ಎ) ಆಡಳಿತಾತ್ಮಕ ಸುಧಾರಣೆಗಳು,  ಬಿ) ಸಾಮಾಜಿಕ ಸುಧಾರಣೆಗಳು,  ಸಿ) ಆರ್ಥಿಕ ಸುಧಾರಣೆಗಳು,  ಡಿ) ಶೈಕ್ಷಣಿಕ ಸುಧಾರಣೆಗಳು


1893ರಲ್ಲಿ ಮಹಾರಾಷ್ಟ್ರದ ಯುವಜನತೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಾಂಪ್ರದಾಯಿಕವಾದ ಗಣಪತಿ ಹಬ್ಬವನ್ನು ಆಚರಿಸಲು ಈತ ಆರಂಭಿಸಿದ್ದು ----  ಈ ವಾಕ್ಯಕ್ಕೆ ಸಂಬಂಧಿಸಿದ್ದು ಯಾರು
ಎ) ವಿಷ್ಣು ಶಾಸ್ತ್ರಿ ಚೆಂಪ್ಲುಕರ್,  ಬಿ) ವಿ.ಡಿ.ಸಾವರ್ಕರ್,  ಸಿ) ಗೋಪಾಲ ಕೃಷ್ಣಗೋಖಲೆ,  ಡಿ) ಬಾಲಗಂಗಾಧರ ತಿಲಕರು


ರಾಜ್ಯಪಾಲರ ಆಜ್ಞೆಯ ಪರಮಾವಧಿ
ಎ) ಒಂದು ವರ್ಷ,  ಬಿ) ಮೂರು ತಿಂಗಳು,  ಸಿ) ಆರು ತಿಂಗಳು,  ಡಿ) ದೀರ್ಘಾವಧಿ


ಸದಸ್ಯನಲ್ಲದ ವ್ಯಕ್ತಿಯಾಗಿ ಸಂಸತ್ತಿನ ಕಲಾಪದಲ್ಲಿ ಯಾರು ಭಾಗವಹಿಸಬಹುದು
ಎ) ಉಪಾಧ್ಯಕ್ಷ,  ಬಿ) ಮುಖ್ಯ ನ್ಯಾಯಾಧೀಶ,  ಸಿ) ಅಟಾರ್ನಿಜನರಲ್,  ಡಿ) ಮುಖ್ಯ ಚುನಾವಣಾ ಆಯುಕ್ತ


ಯುದ್ಧ ಅಥವಾ ಶಾಂತಿಯ ಆದೇಶವನ್ನು ಕಾನೂನಿನಲ್ಲಿ ಯಾರು ಹೊರಡಿಸಬಹುದು
ಎ) ಭೂಸೈನ್ಯದ, ನೌಕಾಪಡೆಯ ಹಾಗೂ ವಾಯುಸೇನೆಗಳ ಮುಖ್ಯಸ್ಥರು,  ಬಿ) ಭಾರತದ ಪ್ರಧಾನ ಮಂತ್ರಿಗಳು,  ಸಿ) ಭಾರತದ ರಾಷ್ಟ್ರಪತಿ,  ಡಿ) ರಕ್ಷಣಾಸಚಿವರು


ವ್ಯಕ್ತಿಸ್ವಾತಂತ್ರದ ಬಹುದೊಡ್ಡ ಚಿನ್ಹೆ
ಎ) ಆಜ್ಞಾಪತ್ರ,  ಬಿ) ಸರ್ಟಿಯೋರರಿ,  ಸಿ) ಕೋ ವಾರೆಂಟೋ,  ಡಿ) ಹೇಬಿಯಸ್ ಕಾರ್ಪಸ್


ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು 1956ರಲ್ಲಿ ಬಲವಂತ್ರಯ್ ಜಿ ಮೆಹ್ತಾ ತಂಡವನ್ನು ಆರಂಭಿಸಿದ ಕಾರಣ
ಎ) ಅಂದಿನ ಜಿಲ್ಲಾ ಪಂಚಾಯ್ತಿಯ ಕಾರ್ಯಕ್ರಮಗಳನ್ನು ವರದಿ ಮಾಡಲು,  ಬಿ) ಹೊಸ ಜಿಲ್ಲಾ ಪಂಚಾಯ್ತಿ ವ್ಯವಸ್ಥೆಯ ಸ್ಥಾಪಿಸಲು ಇರುವ ಸಾದ್ಯತೆಗಳ ಬಗ್ಗೆ ಪರಿಶೀಲನೆ,  ಸಿ) ಪ್ರಜಾಪ್ರಭುತ್ವದ ವಿಕೇಂದ್ರಿಕರಣಕ್ಕೆ ಸಲಹೆ ನೀಡಲು,  ಡಿ) ಸಾಮಾಜಿಕ ಅಭಿವೃದ್ಧಿ

ಯೋಜನೆಗಳ ಉತ್ತಮ ರೀತಿಯ ಅನುಷ್ಠಾನಕ್ಕೆ ಬೇಕಾದ ಸಲಹೆ ನೀಡಲು


ಬಿರ್ಸಾಮುಂಡಾರವರು ಬುಡಕಟ್ಟು ಜನಾಂಗದ ಹೋರಾಟದಲ್ಲಿ ಪಾಲುಗೊಂಡಿದ್ದ  ಪ್ರದೇಶ
ಎ) ಈಶಾನ್ಯ ಪ್ರದೇಶ,  ಬಿ) ಜಾರ್ಖಂಡ್,  ಸಿ) ನಗರ ವಿಭಾಗ,  ಡಿ) ಡೆಕ್ಕನ್


ಮಹಿಳಾ ರಾಷ್ಟ್ರೀಯ ಆಯೋಗ ರಚನೆಯಾದದ್ದು
ಎ) ಸಂವಿಧಾನದಲ್ಲಿ ಮಾಡಿದ ಬದಲಾವಣೆಯಿಂದ,  ಬಿ) ಸಚಿವ ಸಂಪುಟದ ನಿರ್ಣಯದಿಂದ,  ಸಿ) ಸಂಸತ್ತಿನ ನಿಬಂಧನೆಯಿಂದ,  ಡಿ) ಭಾರತದ ಅಧ್ಯಕ್ಷರ ಆಜ್ಞೆಯಿಂದ


ಕೆಳಗಿನ ಪ್ರಧನಮಂತ್ರಿಗಳಲ್ಲಿ ಯಾರು ಅಲ್ಪಸಂಖ್ಯಾತರ ಮುಖ್ಯಸ್ಥರಾಗಿರಲಿಲ್ಲ
ಎ) ಐ.ಕೆ.ಗುಜ್ರಾಲ್,  ಬಿ) ವಿ.ಪಿ.ಸಿಂಗ್,  ಸಿ) ಚಂದ್ರಶೇಖರ್,  ಡಿ) ಮುರಾರ್ಜಿ ದೇಸಾಯಿ


ಕೆಳಕಂಡ ವ್ಯಕ್ತಿಗಳಲ್ಲಿ ಭಾರತದಲ್ಲಿನ ಸ್ಥಳೀಯ ಸ್ವಯಂ-ಸರ್ಕಾರವನ್ನು ಪರಿಚಯಿಸಿದವರು ಯಾರು
ಎ) ಲಾರ್ಡ್ ಮೌಂಟ್ ಬ್ಯಾಟನ್,  ಬಿ) ಲಾರ್ಡ್ ರಿಪ್ಪನ್,  ಸಿ) ಲಾರ್ಡ್ ಕ್ಯಾನಿಂಗ್,  ಡಿ) ಲಾರ್ಡ್ ಮೆಕಾಲೆ


ಭಾರತದ ಪ್ರಜೆಯಾಗಲು ಕೆಳಗಿನವುಗಳನ್ನು ಯಾವ ನಿಯಮ ಅನ್ವಯಿಸುವುದಿಲ್ಲ
ಎ) ಜನನ,  ಬಿ) ಸಂತತಿ,  ಸಿ) ಆಸ್ತಿಗಳಿಕೆ,  ಡಿ) ಪರಕೀಯರಿಗೆ ಪ್ರಜಾಹಕ್ಕುಗಳನ್ನು ಕೊಡುವುದು


ಗಾಂಧೀಜಿಯವರು ಯಾರ ಕಾನ್ಸೆನ್ಸ್ ಕೀಪರ್ ಎಂದು ಪರಿಗಣಿಸಲ್ಪಟ್ಟವರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಆರ್.ಟ್ಯಾಗೂರ್,  ಸಿ) ವಿ.ಪಾಟೇಲ್,  ಡಿ) ಜಿ.ಕೆ.ಗೋಖಲೆ


ಕ್ವಿಟ್ ಇಂಡಿಯಾ ಚಳುವಳಿಯನ್ನು ನ್ಯಾಷನಲ್ ಕಾಂಗ್ರೆಸ್ ಆರಂಭಿಸಿದ್ದು ಯಾವ ವೈಫಲ್ಯದ ನಂತರ
ಎ) ಕ್ರಿಪ್ಸ್ ಮಿಷನ್,  ಬಿ) ಲಾರ್ಡ್ ವೇವಲ್ ರ ಸಿಮ್ಲಾ ಸಭೆ ನಡೆದ ಸಂದರ್ಭ,  ಸಿ) ಕ್ಯಾಬಿನೆಟ್ ಮಿಷನ್,  ಡಿ) ಯಾವುದು ಅಲ್ಲ


ಗಾಂದೀಜಿಯವರ ರಾಮರಾಜ್ಯದ ಎರಡು ನಿಯಮಗಳು
ಎ) ಸತ್ಯ ಮತ್ತು ಅಹಿಂಸೆ,  ಬಿ) ನ್ಯಾಯ ಮಾರ್ಗ ಮತ್ತು ಉತ್ತಮ ಗುರಿ,  ಸಿ) ಖಾದಿ ಮತ್ತು ಅಹಿಂಸೆ,  ಡಿ) ಪ್ರಜಾಪ್ರಭುತ್ವ ಮತ್ತು

ಸಮಾಜವಾದ


ಮಹದೇವ ಗೋವಿಂದ ರಾನಡೆಯವರು ಸದಸ್ಯರಾಗಿದ್ದುದು
ಎ) ಆರ್ಯ ಸಮಾಜ,  ಬಿ) ಪ್ರಾರ್ಥನಾ ಸಮಾಜ,  ಸಿ) ಇಂಡಿಯಾ ಲೀಗ್,  ಡಿ) ಥಿಯಾಸಫಿಕಲ್ ಸೊಸೈಟಿವೃತ್ತಿಪರ ನಾಗರೀಕ ಅವಿಧೇಯತಾ ಚಳುವಳಿ ಆರಂಭಗೊಂಡದ್ದು
ಎ) 1942,  ಬಿ) 1940,  ಸಿ) 1945,  ಡಿ) 1947ವಲ್ಲಭಬಾಯಿ ಪಟೇಲರಿಗೆ ಸರ್ದಾರ್ ಬಿರುದು ನೀಡಿದ್ದು ಯಾರು
ಎ) ಸಿ.ರಾಜಗೋಪಾಲ ಚಾರಿ,  ಬಿ) ಎಂ.ಕೆ.ಗಾಂಧಿ,  ಸಿ) ಜೆ.ಎಲ್.ನೆಹರು,  ಡಿ) ಎಂ.ಎ.ಜಿನ್ನಾಈ ಪ್ರಭಲ ಹಿಂದುಸ್ತಾನಿ ಗಾಯಕರು ಶ್ರೀ. ಅಲ್ಲಾಡಿಯ ಖಾನ್ ಅವರ ಶಿಷ್ಯರು
ಎ) ಗಂಗೂಬಾಯಿ ಹಾನಗಲ್,  ಬಿ) ಮಲ್ಲಿಕಾರ್ಜುನ ಮನ್ಸೂರ್,  ಸಿ) ಬಸವರಾಜ ರಾಜಗುರು,  ಡಿ) ಪಂಡಿತ್ ಭೀಮಸೇನ ಜೋಷಿಭಾರತದಲ್ಲಿ ಬ್ರಿಟೀಷರ ಕೊನೆಯ ಎರಡು ವರ್ಷಗಳಲ್ಲಿ ಅನೇಕ ಚಳುಗಳಿಗಳು ಜರುಗಿದವು ಇದಕ್ಕೆ ಸೇರದಿರುವುದು
ಎ) ತಿರುವನಂತಪುರದ ಪುನ್ನಪ್ರ ವಯಲಾರ್,  ಬಿ) ಬಂಗಾಳದ ತೆಂಗ,  ಸಿ) ಹೈದರಾಬಾದಿನ ತೆಲಂಗಾಣ ಚಳುವಳಿ,  ಡಿ) ಅವಧ್ ನಲ್ಲಿನ ಏಕಾ ಚಳುವಳಿಭಾರತದಲ್ಲಿ ಸ್ವದೇಶಿ ಚಳುವಳಿ ಆರಂಭಗೊಂಡಿದ್ದು
ಎ) ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹ,  ಬಿ) ಬಂಗಾಳದ ವಿಭಜನೆಯ ವಿರುದ್ಧದ ಚಳುವಳಿ,  ಸಿ) ರೌಲತ್ ಆಕ್ಟ್ ವಿರುದ್ಧ ಪ್ರತಿಭಟನೆ,  ಡಿ) 1919-22 ರ ಮೊದಲ ಅಸಹಕಾರ ಚಳುವಳಿಅವರಿಗಿಂತ ಹೆಚ್ಚಾಗಿ ನನಗೆ ಸೋಲಾದದ್ದು  ಗಾಂಧಿಯವರು ಈ ಹೇಳಿಕೆ ನೀಡಿದ್ದು ಯಾರಿಗೆ
ಎ) ಸಿ.ಆರ್.ದಾಸ್,  ಬಿ) ಸರ್ದಾರ್ ವಲ್ಲಭ ಭಾಯಿ ಪಟೇಲ್,  ಸಿ) ಪಟ್ಟಾಭಿ ಸೀತಾರಾಮಯ್ಯ,  ಡಿ) ಸಿ. ರಾಜಗೋಪಾಲ ಚಾರಿಭೂಮಿಯಿಂದ ನಕ್ಷತ್ರಗಳಿಗಿರುವ ದೂರವನ್ನು ಅಳೆಯುವ ಪ್ರಮಾಣ
ಎ) ಜ್ಯೋತಿವರ್ಷ,  ಬಿ) ಮಾರು,  ಸಿ) ಸಮುದ್ರಯಾನದ ಮೈಲಿಗಳು,  ಡಿ) ಕಿಲೋ ಮೀಟರ್ಗಳು1, 4, 9, 16, 25 ______ ?
ಎ) 36,  ಬಿ) 30,  ಸಿ) 35,  ಡಿ) 40ಸುರುಳಿಯಾಕಾರದ ಸಮುದ್ರದ ಅಲೆಗಳು ಏಳುವುದು ಯಾವ ದಿನಗಳಲ್ಲಿ
ಎ) ಅಮಾವಾಸ್ಯೆಯಂದು,  ಬಿ) ಶುಕ್ಲಪಕ್ಷದ ಮೊದಲ ವಾರ,  ಸಿ) ಶೂಕ್ಲ ಪಕ್ಷದ ಮೂರನೆ ವಾರ,  ಡಿ) ಹುಣ್ಣಿಮೆಯಂದುಅಲ್ಟ್ರಾವೈಲೆಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಅನಿಲ ಯಾವುದು
ಎ) ಮೀಥೇನ್,  ಬಿ) ನೈಟ್ರೋಜನ್,  ಸಿ) ಓಝೋನ್,  ಡಿ) ಹೀಲಿಯಂಪದರುಗಲ್ಲುಗಳನ್ನು ಗುರುತಿಸಿ
1) ಬಸಾಲ್ಟ್,  2) ಸುಣ್ಣದ ಕಲ್ಲು,  3) ಷೇಲ್,  4) ಗ್ರಾನೈಟ್,  5) ಕ್ವಾರ್ಟ್ಸ್

ಎ) 1ಹಾಗೂ2,  ಬಿ) 2ಹಾಗೂ3,  ಸಿ) 2ಹಾಗೂ5,  ಡಿ) 3ಹಾಗೂ4ತೇವಾಂಶ ಅಳೆಯಲು ಬಳಸುವ ಸಾಧನ
ಎ) ಬಾರೋ ಮೀಟರ್,  ಬಿ) ಥರ್ಮಾ ಮೀಟರ್,  ಸಿ) ಹೈಗ್ರೋ ಮೀಟರ್,  ಡಿ) ಹೈಡ್ರೋಮೀಟರ್ಪ್ರಪಂಚದ ಅತಿ ದೊಡ್ಡ ಮೀನು ಉತ್ಪಾದಕ ರಾಷ್ಟ್ರ
ಎ) ಚೀನ,  ಬಿ) ರಷ್ಯ,  ಸಿ) ಜಪಾನ್,  ಡಿ) ನಾರ್ವೆರೇಬಿಸ್ ನಿಂದ ತೊಂದರೆಗೊಳಗಾಗುವುದು
ಎ) ಮೇಕೆ,  ಬಿ) ದನಗಳು,  ಸಿ) ಕೋಳಿಗಳು,  ಡಿ) ಎಲ್ಲಾ ಪ್ರಾಣಿಗಳುತೆಂಗಿನ ಅತಿ ದೊಡ್ಡ ಉತ್ಪಾದಕ ರಾಜ್ಯ ಯಾವುದು
ಎ) ಅಸ್ಸಾಂ,  ಬಿ) ಕೇರಳ,  ಸಿ) ತಮಿಳುನಾಡು,  ಡಿ) ಕರ್ನಾಟಕಕುಂದ ಜಲವಿದ್ಯುತ್ ಯೋಜನೆ ಅನುಷ್ಟಾನ ಗೊಳಿಸಿರುವ ರಾಜ್ಯ ಯಾವುದು
ಎ) ಪಶ್ಚಿಮ ಬಂಗಾಳ,  ಬಿ) ಒರಿಸ್ಸಾ,  ಸಿ) ಕರ್ನಾಟಕ,  ಡಿ) ತಮಿಳುನಾಡುವಿಚಾರ ಸರಣಿಯಲ್ಲಿ ಹಣದುಬ್ಬರವೆಂದರೆ
ಎ) ಅಗತ್ಯ ವಸ್ತುಗಳ ಬೆಲೆ ಅದಾಯಕ್ಕಿಂತ ಹೆಚ್ಚಾದಾಗ,  ಬಿ) ಜಿ.ಡಿ.ಪಿ.ಗಿಂತ ಹಣದ ಸರಬರಾಜು ಹೆಚ್ಚಾದಾಗ,  ಸಿ) ಹಣ ವಿನಿಮಯದಲ್ಲಿ ರುಪಾಯಿ ಮೌಲ್ಯ ಕುಸಿದಾಗ,  ಡಿ) ರಾಜ್ಯಾದಾಯ ಕೊರತೆ ನಿಶ್ಚಿತ ಸಂದಾಯದ ಕೊರತೆಗಿಂತ ಹೆಚ್ಚಾದಾಗಒಂದು ಸಂಸ್ಥೆಯು ಅಸ್ವಸ್ಥಗೊಂಡಿದೆಯೆಂದು ಹೇಳಲು, ಆರ್ಥಿಕ ವರ್ಷದ ಕೊನೆಯಲ್ಲಿ ಕ್ರೂಢಿಕರಿಸಿದ ನಷ್ಟದ ಪ್ರಮಾಣವು ಮೂಲ ಬಂಡವಾಳದ ಶೆ. _______ ಕ್ಕಿಂತ ಕಡಿಮೆಯಿದ್ದರೆ
ಎ) 100,  ಬಿ) 75,  ಸಿ) 50,  ಡಿ) 25ಉದ್ಯಮದ ಅಸ್ವಸ್ಥತೆಗೆ ಕಾರಣವಾಗುವ ಆಂತರಿಕ ಕಾರಣ ಇದಲ್ಲ
ಎ) ಅವ್ಯವಸ್ಥೆ,  ಬಿ) ವಿದ್ಯುತ್ ಕಡಿತ,  ಸಿ) ತಪ್ಪಾದ ಡಿವಿಡೆಂಡ್ ಪಾಲಿಸಿ,  ಡಿ) ಬಂಡವಾಳದ ವಿಂಗಡಣೆಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಕಂದಾಯದ ಅದಾಯ ಬರುವುದು
ಎ) ಅದಾಯ ತೆರಿಗೆ,  ಬಿ) ಎಜುಕೇಷನ್ ಸೆಸ್,  ಸಿ) ಕೇಂದ್ರ ಸುಂಕ ತೆರಿಗೆ,  ಡಿ) ಆಯಾತ ಸುಂಕನ್ಯಾಷನಲ್ ಸೆಕ್ಯುರಿಟೀಸ್ ಡೆಪೋಸಿಟರಿ ಲಿಮಿಟೆಡ್ (ಎನ್.ಎಸ್.ಡಿ.ಎಲ್) ವ್ಯವಹಾರ ನೆಡೆಸುವುದು
ಎ) ಬೇರರ್ ಬಾಂಡ್,  ಬಿ) ಜಿ.ಡಿ.ಆರ್.ಗಳು,  ಸಿ) ಎಲೆಕ್ಟ್ರಾನಿಕ್ ಷೇರುಗಳು,  ಡಿ) ಡಿಬೆಂಚರುಗಳುಭಾರತಕ್ಕೆ ಯೋಜಿತ ಮಿತವ್ಯಯ (1934) ರ ರೂವಾರಿ
ಎ) ಜಾನ್ ಮಥಾಯಿ,  ಬಿ) ಎಂ.ಎನ್.ರಾಯ್,  ಸಿ) ಎಂ.ವಿಶ್ವೇಶ್ವರಯ್ಯ,  ಡಿ) ಶ್ರೀಮನ್ ನಾರಾಯಣ್ಮಾನವನ ಬಡತನ ಸೂಚಕವನ್ನು ಅಳೆಯುವ ಮಾನದಂಡ
ಎ) ದೀರ್ಘಾಯುಷ್ಯ, ಪೋಷನೆ ಮತ್ತು ಜ್ಞಾನ,  ಬಿ) ಜ್ಞಾನ, ಅವಶ್ಯಕತೆ ಮತ್ತು ಜೀವನ ಮಟ್ಟ,  ಸಿ) ದೀರ್ಘಾಯುಷ್ಯ, ಜೀವನ ಮಟ್ಟ ಮತ್ತು ನೈರ್ಮಲ್ಯ,  ಡಿ) ದೀರ್ಘಾಯುಷ್ಯ, ಜ್ಞಾನ ಮತ್ತು ಜೀವನ ಮಟ್ಟಸಂಸ್ಕಾರಿ ಅಧೀನಪ್ರದೇಶವು ಕೆಳಗಿನ ಯಾವ ವಿಸ್ತೀರ್ಣಕ್ಕಿಂತ ಹೆಚ್ಚಿನದಾಗಿದ್ದರೆ ಬಹುಪಾಲು ನೀರಾವರಿ ಯೋಜನೆಗಳೆನ್ನಬಹುದು
ಎ) 5000 ಹೆಕ್ಟೇರ್,  ಬಿ) 2000 ಹೆಕ್ಟೇರ್,  ಸಿ) 1500 ಹೆಕ್ಟೇರ್,  ಡಿ) 10000 ಹೆಕ್ಟೇರ್ಮುಕ್ತ ವ್ಯಾಪಾರದಿಂದ ಪಕ್ಷಪಾತ ರಕ್ಷಣೆಗೆ 1923ರ ಬ್ರಿಟೀಷ್ ಇಂಡಿಯನ್  ಪಾಲಿಸಿಯ ರದ್ದುವಿಕೆಗೆ ಕಾರಣ
ಎ) ಮಾಂಟೆಗೊ-ಚೆಲ್ಮ್ಸಫೋರ್ಡ್ ಸುಧಾರಣೆ,  ಬಿ) ರಾಜ್ಯಾದಾಯ ಆಯುಕ್ತರ ಶಿಫಾರಸ್ಸು,  ಸಿ) ಸ್ವದೇಶಿ ಚಳುವಳಿ,  ಡಿ) ಅಮೇರಿಕ ವ್ಯಾಪಾರದಲ್ಲಿನ ಬದಲಾವಣೆಶಕ ವರ್ಷದ ಪ್ರಕಾರ ರಾಷ್ಟ್ರೀಯ ಕ್ಯಾಲೆಂಡರಿನ ಕೊನೆಯ ತಿಂಗಳು ಯಾವುದು
ಎ) ಚೈತ್ರ,  ಬಿ) ಮಾಘ,  ಸಿ) ಶ್ರಾವಣ,  ಡಿ) ಫಾಲ್ಗುಣಶಬ್ದದ ಪುನರಾವೃತ್ತಿಗೆ ಸಿಡಿ ಬಳಸುವುದು
ಎ) ಕ್ವಾರ್ಟ್ಸ್ ಹರಳು,  ಬಿ) ಟೈಟಾನಿಯಂ ಸೂಜಿ,  ಸಿ) ಲೇಸರ್ ಕಿರಣ,  ಡಿ) ಬೇರಿಯಂ ಟೈಟಾನಿಯಂ ಸೆರಾಮಿಕ್ಸ್ವರ್ಡ್ ಪ್ರೊಸೆಸಿಂಗ್ ವ್ಯವಸ್ಥೆಗೆ ಬಳಸುವ ಸಾಧನ
ಎ) ಫ್ಲಾಪಿ ಡಿಸ್ಕ್,  ಬಿ) ಮ್ಯಾಗ್ನೆಟಿಕ್ ಕಾರ್ಡ್ ರೀಡರ್,  ಸಿ) ಸಿ.ಆರ್.ಟಿ,  ಡಿ) ಮೇಲಿನ ಎಲ್ಲವುಎಂ.ಎಸ್ ಡಾಸ್ ಇದು
ಎ) ಅನ್ವಯಿಕ ಸಾಫ್ಟ್ ವೇರ್,  ಬಿ) ಹಾರ್ಡ್ವೇರ್,  ಸಿ) ಸಿಸ್ಟಂ ಸಾಫ್ಟ್ವೇರ್,  ಡಿ) E.R.P.ಸಾಫ್ಟ್ ವೇರ್ಈ ಕೆಳಗಿನವುಗಳಲ್ಲಿ ಯಾವುದನ್ನು ಯೂರೋಪಿನ ಆಟದಮೈದಾನ ಎಂದು ಕರೆಯುತ್ತಾರೆ
ಎ) ಇಟಲಿ,  ಬಿ) ಫ್ರಾನ್ಸ್,  ಸಿ) ಸ್ವಿರ್ಟರ್ಲ್ಯಾಂಡ್,  ಡಿ) ಜರ್ಮನಿಕೆ.ಎಲ್.ಎಂ ರಾಯಲ್ ಏರ್ಲೈನ್ಸ್ ಸೇರಿರುವುದು
ಎ) ಇಟಲಿಗೆ,  ಬಿ) ಜಪಾನ್,  ಸಿ) ನೆದರ್ಲ್ಯಾಂಡ್,  ಡಿ) ಆಸ್ಟ್ರಿಯಾಅಮಿತ್ ರೂ 30000/- ಬಂಡವಾಳದೊಂದಿಗೆ ತನ್ನ ವ್ಯವಹಾರವನ್ನು ಪ್ರಾರಂಭಿಸುತ್ತಾನೆ, ಕೆಲವು ತಿಂಗಳ ನಂತರ ರಾಹುಲ್ 20000ರೂ ಬಂಡವಾಳದೊಂದಿಗೆ ಆ ವ್ಯವಹಾರದಲ್ಲಿ ಸೇರಿಕೊಳ್ಳುತ್ತಾನೆ.  ವರ್ಷದ ಕೊನೆಯಲ್ಲಿ ಬಂದ ಲಾಭವನ್ನು 2:1ರ 
ಪ್ರಮಾಣದಲ್ಲಿ ಹಂಚಿಕೊಳ್ಳುತ್ತಾರೆ.  ಹಾಗಾದರೆ ರಾಹುಲ್ ಎಷ್ಟು ತಿಂಗಳ ನಂತರ ಈ ವ್ಯವಹಾರದಲ್ಲಿ ಸೇರಿಕೊಂಡಿರುತ್ತಾನೆ
ಎ) 2,  ಬಿ) 3,  ಸಿ) 4,  ಡಿ) 5Knowing is every thing ಎನ್ನುವ ವಾಕ್ಯವನ್ನು ಬಳಸುವ ಕಂಪನಿಯಾವುದು
ಎ) ಬಿಬಿಸಿ ವರ್ಲ್ಡ್,  ಬಿ) ಸ್ಟಾರ್,  ಸಿ) ಸೋನಿ,  ಡಿ) ಝೀಭಾರತದಲ್ಲಿ ಅತಿಹೆಚ್ಚು ಗೋಡಂಬಿ ಬೆಳೆಯುವ ರಾಜ್ಯ ಯಾವುದು
ಎ) ತಮಿಳುನಾಡು,  ಬಿ) ಅಸ್ಸಾಂ,  ಸಿ) ಕೇರಳ,  ಡಿ) ಕರ್ನಾಟಕದಕ್ಷಿಣ ಕೊರಿಯಾದ ಅತಿ ದೊಡ್ಡಕಾರು ತಯಾರಿಸುವ ಸಂಸ್ಥೆಯಾವುದು
ಎ) ಹ್ಯುಂಡೈ,  ಬಿ) ಹೊಂಡ,  ಸಿ) ಸುಝುಕಿ,  ಡಿ) ಟಯೋಟಸಂಸ್ಥೆಯ ಲಾಭವನ್ನು ಸಮನಾಗಿ ಹಂಚಿಕೊಳ್ಳುವ ಶೇರುದಾರರನ್ನು ಹೀಗೆ ಕರೆಯುವರು
ಎ) ಪ್ರಿಫೆರೆನ್ಸ್ ಷೇರು,  ಬಿ) ಈಕ್ವಿಟಿ ಷೇರು,  ಸಿ) ಮುಖಬೆಲೆ ಷೇರು,  ಡಿ) ಡೆಫರ್ಡ್ ಷೇರುಸ್ಪೀಡ್ ಎಂಬ ಉತ್ತಮ ಗುಣಮಟ್ಟದ ಪೆಟ್ರೋಲ್ ಪರಿಚಯಿಸಿದ ಪೆಟ್ರೋಲಿಯಂ ಸಂಸ್ಥೆ ಯಾವುದು
ಎ) ಭಾರತ್ ಪೆಟ್ರೋಲಿಯಂ,  ಬಿ) ಇಂಡಿಯನ್ ಆಯಿಲ್,  ಸಿ) ಹಿಂದುಸ್ತಾನ್ ಪೆಟ್ರೋಲಿಯಂ,  ಡಿ) ರಿಲಯನ್ಸ್ಅಣುಶಕ್ತಿಯ ವಿದ್ಯುತ್ ಸ್ಥಾವರ ಕರ್ನಾಟಕದಲ್ಲಿ ಎಲ್ಲಿದೆ
ಎ) ಸಾಗರ,  ಬಿ) ಬೀದರ್,  ಸಿ) ಕೈಗಾ,  ಡಿ) ದಾಂಡೇಲಿಗೌರಿಬಿದನೂರು ಪ್ರಸಿದ್ಧಿಗೆ ಬರಲು ಕಾರಣ
ಎ) ಅಣೆಕಟ್ಟು,  ಬಿ) ಸಿಸ್ಮೋಗ್ರಾಫಿಕ್ ಅಳವಡಿಕೆ,  ಸಿ) ಹೊಯ್ಸಳ ದೇವಸ್ಥಾನಗಳು,  ಡಿ) ಮಿಶ್ರಧಾತು ಸ್ಥಾವರಹಟ್ಟಿ ಚಿನ್ನದ ಗಣಿ ಇರುವುದು ಎಲ್ಲಿ
ಎ) ಗುಲ್ಬರ್ಗಾ,  ಬಿ) ರಾಯಚೂರು,  ಸಿ) ಕೊಪ್ಪಳ,  ಡಿ) ಬೀದರ್ನಿಶ್ಯಬ್ದ ಗೋಪುರ ಹೊಂದಿಕೊಂಡಿರುವುದು
ಎ) ಜೈನರಿಗೆ,  ಬಿ) ಬೌದ್ಧರಿಗೆ,  ಸಿ) ಹಿಂದುಗಳಿಗೆ,  ಡಿ) ಪಾರ್ಸಿಗಳಿಗೆಐ.ಎಲ್.ಓ. ಪ್ರಧಾನ ಕಛೇರಿ ಇರುವುದು ಎಲ್ಲಿ
ಎ) ರೋಮ್,  ಬಿ) ಜಿನಿವಾ,  ಸಿ) ವಾಷಿಂಗ್ಟನ್,  ಡಿ) ನ್ಯೂಯಾರ್ಕ್ಅರಣ್ಯ ನಾಶದಿಂದ ಕಡಿಮೆಯಾಗುವುದು
ಎ) ಮಳೆ,  ಬಿ) ಮಣ್ಣಿನ ಸವೆತ,  ಸಿ) ಸುಂಟರಗಾಳಿ,  ಡಿ) ಭೂಸವೆತಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸುವುದು ಈ ಅದಿರಿನಿಂದ
ಎ) ಬಾಕ್ಸೈಟ್,  ಬಿ) ಝಿಂಕ್,  ಸಿ) ಟಿನ್,  ಡಿ) ಲೆಡ್ & ಝಿಂಕ್ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಯಿರುವುದು
ಎ) ಯಲಹಂಕ,  ಬಿ) ಕೊಲ್ಕತ್ತ,  ಸಿ) ಮುಂಬೈ,  ಡಿ) ನವದೆಹಲಿಶಬ್ಧ ಅಳೆಯುವ ಪ್ರಮಾಣ ಯಾವುದು
ಎ) ನ್ಯೂಟನ್,  ಬಿ) ಜೌಲ್,  ಸಿ) ಡೆಸಿಬಲ್,  ಡಿ) ವ್ಯಾಟ್ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ 'ಮೂನ್ ಮಿಷನ್' ಯಾವುದು
ಎ) ಜಟಾಯು,  ಬಿ) ಪುಷ್ಪಕ್,  ಸಿ) ಆರ್ಯಭಟ,  ಡಿ) ಚಂದ್ರಯಾನಎಜುಸ್ಯಾಟ್ ಬಗೆಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾದುದು
ಎ) ಇಸ್ರೋ ಉಡಾಯಿಸಿರುವ ಅತಿ ಭಾರದ ಉಪಗ್ರಹ ಇದಾಗಿದೆ,  ಬಿ) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಪ್ರಥಮ ಉಪಗ್ರಹ,  ಸಿ) ಜಿ.ಎಸ್.ಎಲ್.ವಿ-ಎಫ್ 01 ರಿಂದ ಇದನ್ನು ಉಡಾಯಿಸಲಾಗಿದೆ,  ಡಿ) ಎಲ್ಲವೂ ಸರಿಸುನಾಮಿ ಎಂದರೆ
ಎ) ಕರಾಟೆಯ ಒಂದು ಪ್ರಕಾರ,  ಬಿ) ಹೂ ಜೋಡಣಾ ಕಲೆ,  ಸಿ) ಸಮುದ್ರದಲ್ಲಿನ ಅಬ್ಬರದ ಅಲೆ ಸರಣಿ,  ಡಿ) ಗಿಡ್ಡಗಿಡಗಳನ್ನು ಬೆಳೆಸುವ ಕಲೆದೇಶದ ಮೊದಲ ಜಲವಿದ್ಯುತ್ ಸ್ಥಾವರ
ಎ) ಶಿವನ ಸಮುದ್ರ,  ಬಿ) ಜೋಗ್ ಫಾಲ್ಸ್,  ಸಿ) ಗೋಕಾಕ್ ಫಾಲ್ಸ್,  ಡಿ) ಅಬ್ಬಿ ಫಾಲ್ಸ್GIGO ಸಂಬಂಧಿಸಿರುವುದು
ಎ) ರಾಕೆಟ್ಗಳಿಗೆ,  ಬಿ) ಆಟೊಮೊಬೈಲ್ ಗಳಿಗೆ,  ಸಿ) ಕಂಪ್ಯೂಟರ್ ಗಳಿಗೆ,  ಡಿ) ಸಂಚಾರಿ ಸಂಕೇತಗಳಿಗೆಸಿಗ್ನೋಮೊನೋಮೀಟರನ್ನು ಬಳಸುವುದು
ಎ) ಹೃದಯ ಸಂಬಂಧಿ ವ್ಯಾಧಿ ಗುರುತಿಸಲು,  ಬಿ) ರಕ್ತದೊತ್ತಡ ಅಳೆಯಲು,  ಸಿ) ನಾಡಿ ಮಿಡಿತ(ಹೃದಯದ ಬಡಿತ) ತಿಳಿಯಲು,  ಡಿ) ದೇಹದಲ್ಲಿನ ಕೊಬ್ಬಿನಾಂಶ ತಿಳಿಯಲುಐರಾವತದಲ್ಲಿ ಪ್ರಯಾಣಿಸಿದೆ ಎಂದು ಯಾರಾದರು ಹೇಳಿದರೆ ಅವರು ಪ್ರಯಾಣಿಸಿದ್ದು
ಎ) ಹಡಗು,  ಬಿ) ವಿಮಾನ,  ಸಿ) ಬಸ್,  ಡಿ) ಆನೆಕೆ.ಎಸ್.ಐ.ಸಿ ಎಂದರೆ
ಎ) ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್,  ಬಿ) ಕರ್ನಾಟಕ ಸ್ಟೀಲ್ ಅಂಡ್ ಐರನ್ ಕಾರ್ಪೊರೇಷನ್,  ಸಿ) ಕರ್ನಾಟಕ ಸ್ಟೇಟ್ ಐರನ್ ಕಂಪನಿ,  ಡಿ) ಕರ್ನಾಟಕ ಸ್ಟೇಟ್ ಇನ್ಸ್ಟಿಟ್ಯೂಟ್ ಫಾರ್ ಕಂಪ್ಯೂಟರ್ಸ್ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ಥಿ ದೊರೆಯಲು ಕಾರಣ
ಎ) ಸಾಪೇಕ್ಷ ಸಿದ್ದಾಂತ,  ಬಿ) ಗುರುತ್ವಾಕರ್ಷಣ ನಿಯಮ,  ಸಿ) ನ್ಯೂಕ್ಲಿಯರ್ ಬಿರಿತ,  ಡಿ) ಪರಮಾಣುಗಳಿಂದ ಬೆಳಕಿನ ಚದುರುವಿಕೆಯುನೈಟೆಡ್ ನೇಷನ್ಸ್ ನಲ್ಲಿ ಮಕ್ಕಳ ವಿಷಯವಾಗಿ ಇರುವ ನಿಯೋಗ ಯಾವುದು
ಎ) ಯೂನಿಸೆಫ್,  ಬಿ) ಯು.ಎನ್.ಡಿ.ಪಿ,  ಸಿ) ಯು.ಎನ್.ಎಫ್.ಪಿ.ಎ,   ಡಿ) ಯು.ಎನ್.ಈ.ಎಸ್.ಸಿ.ಓರಫ್ತು ಸಾಗಣೆ ವಲಯವನ್ನು ವಿಶೇಷ ಅರ್ಥಿಕ ವಲಯವನ್ನಾಗಿ ಪರಿವರ್ತಿಸಲಾಗಿದೆ, ಈ ಕೆಳಕಂಡ ಸ್ಥಳಗಳಲ್ಲಿ ಯಾವುದು ವಿಶೇಷ ಆರ್ಥಿಕ ವಲಯವಲ್ಲ
ಎ) ನೋಯ್ಡಾ,  ಬಿ) ಸೂರತ್,  ಸಿ) ವಡೋದರ,  ಡಿ) ವಿಶಾಖಪಟ್ಟಣಂಕೆಳಗಿನ ಯಾವುದು ಚಹ ಎಲೆ ಸಂಸ್ಕರಣೆಗೆ ಪ್ರಮುಖವಾದುದಲ್ಲ
ಎ) ಉರುಳುವಿಕೆ,  ಬಿ) ಒಣಗಿಸುವಿಕೆ,  ಸಿ) ಹುಳಿಯುವಿಕೆ,  ಡಿ) ಇಂಗಿಸುವಿಕೆರಕ್ಷಣಾ ನಿರ್ವಹಣ ಶಿಕ್ಷಣ ಸಂಸ್ಥೆ ಎಲ್ಲಿದೆ
ಎ) ಡೆಹ್ರಾಡೂನ್,  ಬಿ) ವೆಲ್ಲಿಂಗ್ ಟನ್,  ಸಿ) ಪುಣೆ,  ಡಿ) ಸಿಕಂದರಾಬಾದ್ಚಂಪಾರಣ್ ಸತ್ಯಾಗ್ರಹವನ್ನು ಮಹಾತ್ಮಗಾಂಧಿಯವರು ಆರಂಭಿಸಿದ ವರ್ಷ
ಎ) 1915,  ಬಿ) 1917,  ಸಿ) 1919,  ಡಿ) 1923ಕೆಳಗಿನವುಗಳಲ್ಲಿ ಯಾವುದು ಶೌರ್ಯ ಪ್ರಶಸ್ಥಿಯಲ್ಲ
ಎ) ಅರ್ಜುನ ಪ್ರಶಸ್ಥಿ,  ಬಿ) ಅಶೋಕ ಚಕ್ರ,  ಸಿ) ಪರಮವೀರ ಚಕ್ರ,  ಡಿ) ಶೌರ್ಯ ಚಕ್ರನ್ಯಾಷನಲ್ ಕೆಡೆಟ್ ಕಾರ್ಪ್ ಎಂಬುದು __________ ಸಂಸ್ಥಯಾಗಿದೆ
ಎ) ಕಾರ್ಖಾನೆ ನೌಕರರ,  ಬಿ) ಶಾಲಾ ಕಾಲೇಜಿನ ವಿದ್ಯಾರ್ಥಿಗಳ,  ಸಿ) ಕೃಷಿ ನಿರತ ರೈತರ,  ಡಿ) ವಿಶ್ವವಿದ್ಯಾಲಯ ಅಧ್ಯಾಪಕರಕೆಳಗಿನವುಗಳಲ್ಲಿ ಯಾವುದು ಜೀವ ಮಂಡಲ ನಿಕ್ಷೇಪವಲ್ಲ
ಎ) ಅಗಸ್ತ್ಯಮಾಲ,  ಬಿ) ಪಂಚಮಾರ್ಹಿ,  ಸಿ) ನಲ್ಲಮಾಲ,  ಡಿ) ನೀಲಗಿರಿNABARD ಎಂದರೆ
ಎ) ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರಲ್ & ರೀಜನಲ್ ಡೆವಲಪ್ ಮೆಂಟ್,  ಬಿ) ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವೆಲಪ್ ಮೆಂಟ್,  ಸಿ) ನ್ಯಾಷನಲ್ ಬ್ಯೂರೋ ಆಫ್ ಏರೊನಾಟಿಕಲ್ ರಿಸರ್ಚ್ ಅಂಡ್ ಡೆವೆಲಪ್ ಮೆಂಟ್,

ಡಿ) ನ್ಯಾಷನಲ್ ಅಗ್ರಿಕಲ್ಚರ್ ಬ್ಯಾಂಕ್ ಆಂಡ್ ಅಸೋಸಿಯೇಟೆಡ್ ರೂರಲ್ ಡೆವೆಲಪ್ ಮೆಂಟ್


ಬೇಡಿಕೆ ನಿಯಮದಲ್ಲಿ 'ಉಳಿದ ವಿಷಯಗಳಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂಬ ವಾಕ್ಯದ ಅರ್ಥ
ಎ) ಬಳಕೆದಾರನ ಆದಾಯದಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಬಿ) ಇತರೆ ವಸ್ತುಗಳ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಸಿ) ಬಳಕೆದಾರನ ಅಭಿರುಚಿಯಲ್ಲಿ ಯಾವುದೇ ವ್ಯತ್ಯಾಸ ಇರಬಾರದು,  ಡಿ) ಮೇಲಿನ ಎಲ್ಲವೂವರಿಷ್ಠ ಪಿಂಚಣಿ ವಿಮಾ ಯೋಜನೆಯನ್ನು ಜಾರಿಗೆ ತಂದವರು
ಎ) ನ್ಯಾಷನಲ್ ಇನ್ಶೂರೆನ್ಸ್ ಕಂಪನಿ,  ಬಿ) ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ,  ಸಿ) ಎಲ್.ಐ.ಸಿ.ಇಂಡಿಯಾ,  ಡಿ) ಓರಿಯಂಟಲ್  ಇನ್ಶೂರೆನ್ಸ್ ಕಂಪನಿ
ಪೂರ್ವ ದೇಶಗಳ ಪವಿತ್ರ ಗ್ರಂಥಗಳು (ಸೇಕ್ರೆಡ್ ಬುಕ್ ಆಫ್ ದಿ ಈಸ್ಟ್) ಬರೆದಂತಹ ಜರ್ಮನ್ ವಿದ್ವಾಂಸನ ಹೆಸರೇನು?
ಎ) ಮ್ಯಾಕ್ಸ್ ಮುಲ್ಲರ್,  ಬಿ) ವಿಲಿಯಂ ಶೇಕ್ಸ್ ಪಿಯರ್, ಸಿ) ಕಾರ್ಲ್ಮಾರ್ಕ್ಸ್ ಡಿ) ಮ್ಯಾಕ್ಸ್ ವೆಬರ್


ಸಂಪ್ರದಾಯದ ಪ್ರಕಾರ ಮುಖ್ಯವಾದ ಪುರಾಣಗಳೆಷ್ಟು
ಎ) 12,  ಬಿ) 14,  ಸಿ) 16,  ಡಿ) 18


ಇವುಗಳಲ್ಲಿ ಯಾವುದು ಕಾಳಿದಾಸ ರಚಿತ ಕೃತಿಯಲ್ಲ
ಎ) ಅಭಿಜ್ಞಾನ ಶಾಕುಂತಲಮ್,  ಬಿ) ಸ್ವಪ್ನ ವಾಸವದತ್ತಂ, ಸಿ) ರಘುವಂಶಮ್,  ಡಿ) ವಿಕ್ರಮೋರ್ವಶೀಯಮ್


ಏ ಎಂಬಾತನು ಅಂಕಗಣಿತದಲ್ಲಿ ಪಡೆದ ಅಂಕಗಳಲ್ಲಿ ಮೂರನೇ ಒಂದು ಭಾಗವು ಆತನು ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳ ಅರ್ಧದಷ್ಟಕ್ಕೆ ಸಮಾನವಾಗಿದೆ.  ಒಂದು ವೇಳೆ ಈ ಎರಡೂ ವಿಷಯಗಳಲ್ಲಿ ಆತನು ಗಳಿಸಿದ ಒಟ್ಟು ಅಂಕಗಳು 150 ಆಗಿದ್ದಲ್ಲಿ ಆತನು ಆಂಗ್ಲಭಾಷೆಯಲ್ಲಿ ಪಡೆದ ಅಂಕಗಳೆಷ್ಟು
ಎ) 90,  ಬಿ) 60,  ಸಿ) 30,  ಡಿ) 80


ಅಕೌಸ್ಟಿಕ್ಸ್ ಈ ಪದವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂದಿಸಿದೆ
ಎ) ಅಕೌಂಟ್ಸ್,  ಬಿ) ಭೌತಶಾಸ್ತ್ರ,  ಸಿ) ಶಬ್ದ, ಡಿ) ವಿದ್ಯುಚ್ಛಕ್ತಿ


ಭಾರತದ ಮೇಲೆ ಬಾಬರನು ಆಕ್ರಮಣವೆಸಗಿದಾಗ ದೆಹಲಿಯಲ್ಲಿ ಯಾವ ಅರಸೊತ್ತಿಗೆಯ ಆಳ್ವಿಕೆ ಇತ್ತು
ಎ) ಗುಲಾಮ,  ಬಿ) ಖಿಲ್ಜಿ,  ಸಿ) ಲೋಧಿ, ಡಿ) ತುಘಲಕ್


ಚುಚ್ಚುಮದ್ದಿನ  (ವ್ಯಾಕ್ಸಿನೇಶನ್) ಮೂಲಕ ಸಿಡುಬನ್ನು ತಡೆಗಟ್ಟಬಹುದೆಂದು ಕಂಡುಹಿಡಿದವರು ಯಾರು
ಎ) ಎಡ್ವರ್ಡ್ ಜನ್ನರ್,  ಬಿ) ಲೂಯಿಪಾಶ್ವರ್, ಸಿ) ಜೋಸೆಫ್ ಲಿಸ್ಟರ್,  ಡಿ) ಅಲೆಗ್ಸಾಂಡರ್ ಫ್ಲೆಮಿಂಗ್


ಸಂವಿಧಾನದ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವುದು ನಿಜವಲ್ಲ
ಎ) ಭಾರತದ ಸಂವಿಧಾನದ ಭಾಗ 4 ರಲ್ಲಿ ಅಳವಡಿಸಿದೆ,  ಬಿ) ಐರ್ಲೆಂಡಿನ ಸಂವಿಧಾನದಿಂದ ಪ್ರೇರಣೆ ಪಡೆದಿದೆ,  ಸಿ) ನ್ಯಾಯಾಂಗದ ಮೂಲಕ ಸಮರ್ಥಿಸಲಾಗದ ಜನರ (ನಾಗರೀಕರ) ಹಕ್ಕುಗಳೆಂದು ತಿಳಿಯಲಾಗಿದೆ,  ಡಿ) ರಚನೆಯ ನಂತರ ಅವುಗಳನ್ನು ತಿದ್ದುಪಡಿಮಾಡಲಾಗಿಲ್ಲ.


ಇವುಗಳಲ್ಲಿ ಯಾವುದು ಪಂಚಾಯತಿ ರಾಜ್ ಸಂಸ್ಥೆಯಲ್ಲ
ಎ) ಗ್ರಾಮ ಸಭಾ,  ಬಿ) ಗ್ರಾಮ ಪಂಚಾಯತ್,  ಸಿ) ನ್ಯಾಯ ಪಂಚಾಯತ್,  ಡಿ) ಗ್ರಾಮ ಸಹಕಾರ ಸಂಘ


2012ರ ಒಲಂಪಿಕ್ ಕ್ರೀಡಾಕೂಟವನ್ನು ನೆಡೆಸಲು ನಿರ್ಧರಿಸಲಾಗಿರುವ ಸ್ಥಳ ಯಾವುದು
ಎ) ಲಂಡನ್,  ಬಿ) ದೆಹಲಿ,  ಸಿ) ಬೀಜಿಂಗ್, ಡಿ) ಪ್ಯಾರಿಸ್


ಯಾವ ದಿನದಂದು ವಿಶ್ವ ಏಡ್ಸ್ ದಿನ ಆಚರಿಸಲಾಗುವುದು
ಎ) 8ನೇ ಅಕ್ಟೋಬರ್,  ಬಿ) 2ನೇ ಏಪ್ರಿಲ್,  ಸಿ) 1ನೇ ಡಿಸೆಂಬರ್,  ಡಿ) 14ನೇ ಫೆಬ್ರವರಿ


ಒಂದು ವೇಳೆ 10 ಸಂಖ್ಯೆಯ ವಸ್ತುಗಳ ಮೂಲ ಬೆಲೆಯು 9 ಸಂಖ್ಯೆಯ ವಸ್ತುಗಳ ಮಾರಾಟ ಬೆಲೆಗೆ ಸಮಾನವಾಗಿದ್ದಲ್ಲಿ ದೊರಕುವ ಲಾಭ 
ಎ) 12%,  ಬಿ) 10%  ಸಿ) 9 1/11%  ಡಿ) 11 1/9%


ಇವರಲ್ಲಿ ಯಾರನ್ನು ಏಷ್ಯಾದ ಬೆಳಕು ಎಂದು ಕರೆಯುತ್ತಾರೆ
ಎ) ಮದರ್ ತೆರೆಸಾ,  ಬಿ) ಮಹಾವೀರ,  ಸಿ) ಕನ್ ಫ್ಯೂಷಿಯಸ್,  ಡಿ) ಗೌತಮ ಬುದ್ಧ


ಎನ್.ಸಿ.ಇ.ಆರ್.ಟಿ. ಇದರ ವಿಸ್ತೃತ ರೂಪ
ಎ) ನ್ಯಾಶನಲ್ ಕೌನ್ಸಿಲ್ ಆಫ್ ಎನ್ವೈರಾನಮೆಂಟ್ ರಿಸರ್ಚ್ ಅಂಡ್ ಟ್ರೈನಿಂಗ್,  ಬಿ) ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್, ಸಿ) ನ್ಯಾಶನಲ್ ಕೌನ್ಸಿಲ್ ಆಪ್ ಇಕಾಲಾಜಿಕಲ್ ರಿಸರ್ಚ್ ಅಂಡ್ ಟ್ರೈನಿಂಗ್,  ಡಿ) ನ್ಯಾಶನಲ್

ಕೌನ್ಸಿಲ್ ಆಫ್ ಎಲೆಕ್ಟ್ರಾನಿಕ್ ರಿಸರ್ಚ್ ಅಂಡ್ ಟ್ರೈನಿಂಗ್


ಇವರಲ್ಲಿ ಯಾವು 20 ನೇ ಶತಮಾನದಲ್ಲಿ ಬದುಕಿದ್ದ ಭಾರತದ ಮಹಾನ್ ಗಣಿತಜ್ಞ
ಎ) ಸರ್.ಸಿ.ವಿ.ರಾಮನ್,   ಬಿ) ಶ್ರೀನಿವಾಸ ರಾಮಾನುಜಂ,  ಸಿ) ಚಂದ್ರಶೇಖರ ಸುಬ್ರಮಣ್ಯಂ,  ಡಿ) ಜಯಂತ ನಾರ್ಳೀಕರ್


400ರಕ್ಕೆ ಬಳಸುವ ರೋಮನ್ ಸಂಖ್ಯಾ ವಾಚಕ ಯಾವುದು
ಎ) DC,  ಬಿ) CD,  ಸಿ) CM, ಡಿ) MC


ಕ್ರಿಕೇಟ್ ಅಂಗಳದ ಪಿಚ್ ಉದ್ದವೆಷ್ಟು
ಎ) 21 ಗಜಗಳು,  ಬಿ) 20 ಗಜಗಳು,  ಸಿ) 22 ಗಜಗಳು,  ಡಿ) 25 ಗಜಗಳು


ಇವುಗಳಲ್ಲಿ ಯಾವುದರೊಂದಿಗೆ ಡಾ|| ಪ್ರಮೋದ್ ಕರಣ್ ಸೇಠಿ ಗುರುತಿಸಲ್ಪಡುತ್ತಾರೆ
ಎ) ಜಯಪುರ ಕಾಲು,  ಬಿ) ಹೃದಯದ ಶಸ್ತ್ರಚಿಕಿತ್ಸೆ, ಸಿ) ಭೌತ ಶಾಸ್ತ್ರ,  ಡಿ) ನರವಿಜ್ಞಾನ


ಸಂಕೇತ ಭಾಷೆಯಲ್ಲಿ APPEAR ಎನ್ನುವ ಪದವನ್ನು PAEPRA ಎಂದು ಬರೆಯಲಾಗಿದ್ದರೆ ಆಗ PROVIDENCE ಎನ್ನುವ ಪದವನ್ನು  ಹೇಗೆ ಬರೆಯಬೇಕಾಗುವುದು
ಎ) PORIVEDCNE,  ಬಿ) RPOVPINECE,  ಸಿ) RPVODINEECಡಿ) EORIVEDCEP


ಮಹಾಭಾರತದ ಮಹಾಕಾವ್ಯದಲ್ಲಿ ಭೀಷ್ಮನ ಮುಂಚಿನ ಹೆಸರೇನಾಗಿತ್ತು
ಎ) ದೇವದತ್ತ,  ಬಿ) ದೇವವ್ರತ,  ಸಿ) ದೇವಸಿಂಹ, ಡಿ) ದೇವವರ್ಮ


ಭಾರತದಲ್ಲೇ ತಯಾರಾದ ಭಾರತದ ಪ್ರಮುಖ ಯುದ್ಧ ಟ್ಯಾಂಕಿನ ಹೆಸರು
ಎ) ಭೀಮ,  ಬಿ) ಪೃಥ್ವಿ,  ಸಿ) ಅರ್ಜುನ್,  ಡಿ) ಬ್ರಹ್ಮೋಸ್


ಈ ಕೆಳಗಿನವರಲ್ಲಿ ಯಾರು ಖ್ಯಾತ ಯಕ್ಷಗಾನ ಕಲಾವಿದರು
ಎ) ಕಯ್ಯಾರ ಕಿಇ್ಇಣ್ಣರೈ ಬಿ) ಕೆರೆಮನೆ ಶಂಭುಹೆಗಡೆ, ಸಿ) ಪ್ರಕಾಶ ರೈ,  ಡಿ) ಗುರುಕಿರಣ


ಕರ್ನಾಟಕದ ಜನಪ್ರಿಯ ಜಾನಪದ ನೃತ್ಯಶೈಲಿಯ ಡೊಳ್ಳು ಕುಣಿತವನ್ನು ಯಾವ ದೇವತೆಯ ಸುತ್ತ ಹೆಣೆಯಲಾಗಿದೆ
ಎ) ಭಗವಾನ್ ವಿಷ್ಣು,  ಬಿ) ಬೀರೇಶ್ವರ,  ಸಿ) ಮಾರಮ್ಮ,  ಡಿ) ಅಣ್ಣಮ್ಮ


ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರು ಯಾರು
ಎ) ಸರ್. ಎಂ.ವಿಶ್ವೇಶ್ವರಯ್ಯ,  ಬಿ) ಬಿ.ಎಂ.ಶ್ರೀಕಂಠಯ್ಯ,  ಸಿ) ಎಚ್.ವಿ.ನಂಜುಂಡಯ್ಯ,  ಡಿ) ಕೆ.ಶ್ರೀನಿವಾಸರಾವ್


ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಪಾಡ್ದನಗಳು ಸಂಬಂಧಿಸಿವೆ
ಎ) ಕೊಡಗಿನ ವಿಶಿಷ್ಟ ಆಹಾರದ ಬಗೆ,  ಬಿ) ಕರಾವಳಿ ಕರ್ನಾಟಕದ ನೃತ್ಯದ ವಿಧ,  ಸಿ) ತುಳುಭಾಷೆಯ ಮಹಾಕಾವ್ಯದ ಮೌಖಿಕ ರೂಪ,  ಡಿ) ಒಂದು ಜನಪ್ರಿಯ ವಚನ


ಮರದ ವಯಸ್ಸನ್ನು ಈ ಕೆಳಗೆ ಕಾಣಿಸಿದ ಯಾವುದರಿಂದ ನಿರ್ಧರಿಸಬಹುದು
ಎ) ಅದರ ಎತ್ತರವನ್ನು ಅಳೆಯುವುದರಿಂದ  ಬಿ) ಅದರ ವ್ಯಾಸವನ್ನು ಅಳೆಯುವುದರಿಂದ  ಸಿ) ಅದರ ಒಳತಿರುಳನ್ನು ವಿಶ್ಲೇಸುವುದರಿಂದ,  ಡಿ) ಅದರ ಕಾಂಡದ ವಾರ್ಷಿಕ ಬೆಳವಣಿಗೆ ಸುರುಳಿಗಳನ್ನು ಎಣಿಸುವುದರಿಂದ


ಭಾರತದ ರಾಜ್ಯವೊಂದರ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರೆಂದು ಹೆಸರಿಸಿ
ಎ) ಸುಚೇತಾ ಕೃಪಲಾನಿ,  ಬಿ) ಸರೋಜಿನಿ ನಾಯ್ಡು, ಸಿ) ನಂದಿನಿ ಸತ್ಪತಿ,  ಡಿ) ಮಾಯಾವತಿ


ಇವುಗಳಲ್ಲಿ ಯಾವುದನ್ನು ಭೂಕಂಪವೊಂದರ ಮೂಲ ಬಿಂದುವೆಂದು ಕರೆಯಲಾಗುತ್ತದೆ
ಎ) ಎಪಿಸೆಂಟರ್,  ಬಿ) ಸಿಸ್ಮಿಕ್ ಫೋಕಸ್,  ಸಿ) ಕ್ವೇಕ್ ಸೆಂಟರ್,  ಡಿ) ಟೆಕ್ಟೋನಿಕ್ ಪಾಯಿಂಟ್


ಇವುಗಳಲ್ಲಿ ಯಾವುದು ಮಂಡಲ್ ಆಯೋಗದ ವರದಿಯಲ್ಲಿ ಪ್ರಮುಖ ಶೀಫಾರಸ್ಸುಗಳಲ್ಲೊಂದಾಗಿದೆ
ಎ) ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ,  ಬಿ) ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ,  ಸಿ) ಚುನಾವಣಾ ಸುಧಾರಣೆಗಳು,  ಡಿ) ಶೈಕ್ಷಣಿಕ ಸುಧಾರಣೆಗಳು


ಈಗಿನ ಮುಖ್ಯ ಚುನಾವಣಾ ಆಯುಕ್ತರು ಯಾರು
ಎ) ನವೀನ್ ಚಾವ್ಲಾ,  ಬಿ) ಎಸ್.ವೈ.ಖುರೇಷಿ,  ಸಿ) ಎನ್.ಗೋಪಾಲಸ್ವಾಮಿ,  ಡಿ) ಸುದಾಕರ ರಾವ್,


ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ
ಎ) ಸಾಯಣ,  ಬಿ) ಕುಮಾರವ್ಯಾಸ,  ಸಿ) ರತ್ನಾಕರವರ್ಣಿ,  ಡಿ) ವಿದ್ಯಾರಣ್ಯ


ಬಸವೇಶ್ವರರು ಅನುಭವ ಮಂಟಪವನ್ನು ಸ್ಥಾಪಿಸಿದ ಸ್ಥಳ
ಎ) ಕೂಡಲ ಸಂಗಮ,  ಬಿ) ಬಸವನ ಬಾಗೇವಾಡಿ,  ಸಿ) ಬಸವ ಕಲ್ಯಾಣ,  ಡಿ) ನಂದಿಕೇಶ್ವರ


ಮೋಹನ ತರಂಗಿಣಿ ಕೃತಿ ರಚಿಸಿದವರು
ಎ) ಪುರಂದರದಾಸರು,  ಬಿ) ಕನಕದಾಸರು,  ಸಿ) ತುಕಾರಮ,  ಡಿ) ಜಯದೇವ


ಇವರಲ್ಲಿ ಯಾರ ಕಾಲಘಟ್ಟಕ್ಕೆ ಮಯೂರ ಸಿಂಹಾಸನ ಸೇರಿದೆ
ಎ) ಜಹಂಗೀರ್,  ಬಿ) ಶಹಜಹಾನ್,  ಸಿ) ಅಕ್ಬರ್,  ಡಿ) ಔರಂಗಜೇಬ್


ಸಂಸ್ಕೃತ ಕೃತಿ 'ಲೀಲಾವತಿ' ಯಾವ ವಿಷಯಕ್ಕೆ ಸಂಬಂಧಿಸಿದೆ
ಎ) ತಂತ್ರಜ್ಞಾನ,  ಬಿ) ಗಣಿತಶಾಸ್ತ್ರ,  ಸಿ) ವಿಜ್ಞಾನ,  ಡಿ) ವೈದ್ಯಕೀಯ ಶಾಸ್ತ್ರ


ಎಲ್ಲ ಆಮ್ಲಗಳಿಗೂ ಸಾಮಾನ್ಯವಾಗಿರುವ ಮೂಲವಸ್ತು
ಎ) ಇಂಗಾಲ,  ಬಿ) ಜಲಜನಕ,  ಸಿ) ಆಮ್ಲಜನಕ,  ಡಿ) ಗಂಧಕ


ಈ ಕೆಳಗಿನ ಮೊಘಲ್ ದೊರೆಗಳಲ್ಲಿ ಯಾರು ಅನಕ್ಷರಸ್ಥ ಎಂದು ತಿಳಿಯಲಾಗಿದೆ
ಎ) ಬಾಬರ್,  ಬಿ) ಹುಮಾಯೂನ್,  ಸಿ) ಅಕ್ಬರ್,  ಡಿ) ಜಹಾಂಗೀರ್


ಹಿಜ್ರಾ ಶಕವನ್ನು ಯಾವಾಗಿನಿಂದ ಪರಿಗಣಿಸಲಾಗುತ್ತದೆ
ಎ) ಕ್ರಿ.ಶ.632,  ಬಿ) ಕ್ರಿ.ಶ.712,  ಸಿ) ಕ್ರಿ.ಶ.722,  ಡಿ) ಕ್ರಿ.ಶ.622


ಇವುಗಳಲ್ಲಿ ಯಾವುದನ್ನು ಸಂವಿಧಾನದ ಕೇಂದ್ರಪಟ್ಟಿಯು ಒಳಗೊಂಡಿಲ್ಲ
ಎ) ಅರಣ್ಯ,  ಬಿ) ರಕ್ಷಣೆ,  ಸಿ) ಅರ್ಥ,  ಡಿ) ರೈಲ್ವೆ


ಯಾವ ದಿನದಂದು ಸಂವಿಧಾನಿಕ ಸಭೆಯು ಭಾರತ ಸಂವಿಧಾನವನ್ನು ಒಪ್ಪಿತು (ಅಂಗೀಕರಿಸಿತು)
ಎ) 18-08-1947,  ಬಿ) 26-01-1950,  ಸಿ) 9-12-1946,  ಡಿ) 26-11-1949


ಯಾವ ಕ್ರೀಡೆಯಲ್ಲಿ ಸಾಧನೆಗಾಗಿ ಅರ್ಜುನ್ ಅತ್ವಾಲ್ ಖ್ಯಾತರಾಗಿದ್ದಾರೆ
ಎ) ಟೆನ್ನಿಸ್,  ಬಿ) ಚೆಸ್,  ಸಿ) ಗಾಲ್ಫ್,  ಡಿ) ಸ್ನೂಕರ್


ಯಾವ ನದಿಗೆ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ
ಎ) ನರ್ಮದಾ,  ಬಿ) ಮಹಾನದಿ,  ಸಿ) ಗೋದಾವರಿ,  ಡಿ) ಕೃಷ್ಣಾ


ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಔದ್ಯಾಗಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ
ಎ) ಎರಡನೇ ಪಂಚೆವಾರ್ಷಿಕ ಯೋಜನೆ,  ಬಿ) ಮೂರನೆ ಪಂಚವಾರ್ಷಿಕ ಯೋಜನೆ,  ಸಿ) ನಾಲ್ಕನೇ ಪಂಚವಾರ್ಷಿಕ ಯೋಜನೆ,  ಡಿ) ಆರನೆ ಪಂಚವಾರ್ಷಿಕ ಯೋಜನೆ


ಗಂಟೆಗೆ 30 ಮೈಲಿ ವೇಗದಲ್ಲಿ ಓಡುತ್ತಿರುವ ರಯಲೊಂದು ಗಂಟೆಗೆ 50 ಮೈಲಿ ವೇಗದಲ್ಲಿ ಓಡುತ್ತಿರುವ ರೈಲಿಗಿಂತ ಮುಂದೆಯಿದೆ.  ಇವುಗಳಲ್ಲಿ ವೇಗವಾಗಿ ಓಡುತ್ತಿರುವ ರೈಲಿಗೆ ನಿಧಾನವಾಗಿ ಓಡುತ್ತಿರುವ ರೈಲನ್ನು ಹಿಡಿಯಲು ಒಂದು ವೇಳೆ 15 ನಿಮಿಷಗಳು ಬೇಕಾಗುವುದಾದರೆ ಅವೆರಡೂ ರೈಲುಗಳು ಪರಸ್ಪರ ಎಷ್ಟು ದೂರದಲ್ಲಿವೆ
ಎ) 5 ಮೈಲಿ,  ಬಿ) 20 ಮೈಲಿ,  ಸಿ) 10 ಮೈಲಿ,  ಡಿ) 15 ಮೈಲಿ


ಜವಾಹರ್ ರೋಜ್ಗಾರ್ ಯೋಜನೆಯ ಉದ್ದೇಶ
ಎ) ಗ್ರಾಮೀಣ ಜನರಿಗೆ ವಸತಿಗಳನ್ನು ಕಲ್ಪಿಸುವುದು,  ಬಿ) ಮಕ್ಕಳಿಗೆ ಶಿಕ್ಷಣ ಕಲ್ಪಿಸುವುದು,  ಸಿ) ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು, ಡಿ) ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು


ಇವರಲ್ಲಿ ಯಾರು ಭಾರತದ ಸಂವಿಧಾನಿಕ ಸಭೆಯ ಅಧ್ಯಕ್ಷರಾಗಿದ್ದರು
ಎ) ಡಾ|| ರಾಜೇಂದ್ರ ಪ್ರಸಾದ್,  ಬಿ) ಬಿ.ಆರ್.ಅಂಬೇಡ್ಕರ್,  ಸಿ) ಕೆ.ಎಂ.ಮುನ್ಶಿ,  ಡಿ) ಶ್ರೀಮತಿ ಸರೋಜಿನಿ ನಾಯ್ಡು


ಇವುಗಳಲ್ಲಿ ಯಾವ ವರ್ಷದಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲ
ಎ) 1962,  ಬಿ) 1967,  ಸಿ) 1971,  ಡಿ) 1975


ಒಂದು ವೇಳೆ 2X3=36, 5X4=400, 6X2=144, 3X3=81 ಆದ ಪಕ್ಷದಲ್ಲಿ ಇವುಗಳಲ್ಲಿ ಯಾವುದು 5X5=? ಕ್ಕೆ ಸರಿಯಾದ ಉತ್ತರಯಾವುದು
ಎ) 225,  ಬಿ) 625,  ಸಿ) 125,  ಡಿ) 25


ಭಾರತದ ಪಾರ್ಲಿಮೆಂಟ್ ಇವುಗಳನ್ನೊಳಗೊಂಡಿದೆ
ಎ) ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ,  ಬಿ) ಲೋಕಸಭೆ, ಸಿ) ರಾಜ್ಯ ಸಭೆ,  ಡಿ) ಲೋಕಸಭೆ & ರಾಜ್ಯಸಭೆ


ಭಾರತದ ನೌಕಾಪಡೆಯ ಮುಖ್ಯಸ್ಥರನ್ನು ಹೀಗೆಂದು ಕರೆಯುತ್ತಾರೆ
ಎ) ಬ್ರಿಗೇಡಿಯರ್,  ಬಿ) ಜನರಲ್,  ಸಿ) ಅಡ್ಮಿರಲ್,  ಡಿ) ಏರ್ ಚೀಫ್ ಮಾರ್ಷಲ್


ಯಾರಿಂದ ಸಾರೆ ಜಹಾಸೆ ಅಚ್ಛಾ ಎನ್ನುವ ದೇಶಭಕ್ತಿಗೀತೆಯು ಬರೆಯಲ್ಪಟ್ಟಿದೆ
ಎ) ರವೀಂದ್ರ ನಾಥ ಠ್ಯಾಗೋರ್,  ಬಿ) ಬಂಕಿಮಚಂದ್ರ ಚಟರ್ಜಿ,  ಸಿ) ಮೊಹಮ್ಮದ್ ಇಕ್ಬಾಲ್,  ಡಿ) ಜಾವೆದ್ ಅಖ್ತರ್


ಫತೇಪುರ ಸಿಕ್ರಿ ನಗರದ ನಿರ್ಮಾತೃ
ಎ) ಅಕ್ಬರ್,  ಬಿ) ಹುಮಾಯೂನ್,  ಸಿ) ಶಹಜಹಾನ್,  ಡಿ) ಜಹಂಗೀರ್


ಸ್ಮೃತಿ ನಾಶ - ಸ್ಮರಣೆಯ ನಾಶವನ್ನು ಸೂಚಿಸಲು ಬಳಸುವ ವೈದ್ಯಕೀಯಪದ
ಎ) ಆಂಬ್ರೋಸಿಯಾ,  ಬಿ) ಅಮ್ನೀಸಿಯಾ,  ಸಿ) ಅನೀಮಿಯಾ,  ಡಿ) ಅನೆಸ್ತೇಸಿಯಾ


ಎಷ್ಟು ವರ್ಷಗಳಿಗೆ ಪ್ಲಾಟೀನಂ ಮಹೋತ್ಸವವನ್ನು ಆಚರಿಸಲಾಗುವುದು
ಎ) 100,  ಬಿ) 50,  ಸಿ) 60,  ಡಿ)

75ವರ್ಷಗಳು


ಹಳೇಬೀಡಿನ ಹಿಂದಿನ ಹೆಸರೇನು
ಎ) ಭೀಮಸಮುದ್ರ,  ಬಿ) ಭರಮಸಾಗರ,  ಸಿ) ದ್ವಾರಸಮುದ್ರ,  ಡಿ) ಧರ್ಮಸಾಗರ


ಇವುಗಳಲ್ಲಿ ಯಾವುದು ಕೆಂಪುರಕ್ತಕಣಗಳ ಸ್ಮಶಾಣವೆಂದು ತಿಳಿಯಲ್ಪಟ್ಟಿದೆ
ಎ) ಅಸ್ಥಿಯ ಮಜ್ಜೆ,  ಬಿ) ಯಕೃತ್(ಲಿವರ್),  ಸಿ) ಪ್ಲೀಹ(ಸ್ಪ್ಲೀನ್),  ಡಿ) ಅಪೆಂಡಿಕ್ಸ್


ಇವುಗಳಲ್ಲಿ ಯಾವುದು ರಕ್ತಹೆಪ್ಪುಗಟ್ಟುವಿಕೆಗೆ ಅತ್ಯಾವಶ್ಯ
ಎ) ಕೆಂಪುರಕ್ತಕಣ,  ಬಿ) ಬಿಳಿರಕ್ತಕಣ,  ಸಿ) ಲಿಂಪೊಸೈಟ್,  ಡಿ) ರಕ್ತದ ಪ್ಲೇಟ್ ಲೆಟ್ಗಳು


ಇವುಗಳಲ್ಲಿ ಯಾವುದು ಪ್ರಾಥಮಿಕ ವರ್ಣಬಣ್ಣಗಳು
ಎ) ಕೆಂಪು, ಹಸಿರು, ನೀಲಿ,  ಬಿ) ಕೆಂಪು, ಹಳದಿ, ನೀಲಿ, ಸಿ) ಹಳದಿ, ನೀಲಿ, ಹಸಿರು,  ಡಿ) ಹಳದಿ, ಹಸಿರು,ಕೆಂಪು


ಇವುಗಳಲ್ಲಿ ಯಾವುದಕ್ಕೆ ಆಪ್ಟಿಕಲ್ ಫೈಬರನ್ನು ಬಳಸುತ್ತಾರೆ
ಎ) ನೇಯ್ಗೆ,  ಬಿ) ಸಂಪರ್ಕ,  ಸಿ) ಸಂಗೀತೋಪಕರಣಗಳು,  ಡಿ) ಕಣ್ಣಿನ ಶಸ್ತ್ರಕ್ರಿಯೆ


ಇವುಗಳನ್ನು ಹೊಂದಿಸಿ


ಎ)


ಎಪಿಕಲ್ಚರ್


1)


ದ್ರಾಕ್ಷಿಬಳ್ಳಿ


ಬಿ)


ಸಿಲ್ವಿಕಲ್ಚರ್


2)


ಮೀನು


ಸಿ)


ವಿಟಿಕಲ್ಚರ್


3)


ಜೇನು


ಡಿ)


ಪಿಸಿಕಲ್ಚರ್


4)


ವೃಕ್ಷಗಳು


ಬಿ


ಸಿ


ಡಿ


a


1


4


3


2


b


3


4


1


2


c


2


1


3


4


d


4


3


2


1


ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ
14, 16, 13, 17, 12, 18, 11, ?
ಎ) 12,  ಬಿ) 19,  ಸಿ) 22, ಡಿ) 14


ಇವುಗಳಲ್ಲಿ ಯಾವುದಕ್ಕೆ ಕಪ್ಪುಪೆಟ್ಟಿಗೆ (ಬ್ಲಾಕ್ ಬಾಕ್ಸ್) ಸಂಬಂಧಿಸಿದೆ
ಎ) ಸಿನೆಮಾ,  ಬಿ) ವಿಮಾನ, ಸಿ) ಉಪಗ್ರಹ, ಡಿ) ಛಾಯಾಗ್ರಹಣ


2010 ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ
ಎ) ಸೈನಾ ನೆಹ್ವಾಲ್,  ಬಿ) ಸಾನಿಯಾ ಮಿರ್ಜಾ,  ಸಿ) ಪಂಕಜ್ ಅದ್ವಾನಿ,  ಡಿ) ಅಭಿನವ್ ಬಿಂದ್ರಾ


ಒಂದು ಶ್ರೇಣಿಯ ಮೊದಲ ನಾಲ್ಕು ಸಂಖ್ಯೆಗಳ ಸರಾಸರಿ 20 ಹಾಗು ಕೊನೆಯ ನಾಲ್ಕು ಸಂಖ್ಯೆಗಳ ಸರಾಸರಿ19 ಆಗಿದ್ದು, ಒಂದು ವೇಳೆ ಶ್ರೇಣಿಯ 5 ನೇ ಸಂಖ್ಯೆ 18 ಆಗಿದ್ದಲ್ಲಿ ಮೊದಲನೇ ಸಂಖ್ಯೆ ಯಾವುದು
ಎ) 22,  ಬಿ) 21,  ಸಿ) 19,  ಡಿ) 20


ಇವರಲ್ಲಿ ಯಾವು ಶೀಘ್ರಲಿಪಿಯ ಸಂಶೋಧಕರು
ಎ) ಧಾಮಸ್ ಆಳ್ವಾ ಎಡಿಸನ್,  ಬಿ) ಐಸಾಕ್ ನ್ಯೂಟನ್, ಸಿ) ಆಲ್ಬರ್ಟ್ ಐಸ್ಸ್ಟೀನ್,  ಡಿ) ಐಸಾಕ್ ಪಿಟ್ ಮನ್


ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷರು ಯಾರು
ಎ) ನ್ಯಾಯಮೂರ್ತಿ ವೈ.ಕೆ.ಸಬರ್ವಾಲ್,  ಬಿ) ನ್ಯಾಯಮೂರ್ತಿ ಜೆ.ಎಸ್.ವರ್ಮಾ,  ಸಿ) ನ್ಯಾಯಮೂರ್ತಿ ಆರ್.ಎಸ್.ಲಹೋಟಿ,  ಡಿ) ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್


ಟೆಸ್ಟ್ ಕ್ರಿಕೇಟ್ ನಲ್ಲಿ ವೈಯುಕ್ತಿಕ ಗರಿಷ್ಠಮೊತ್ತದ(ಸ್ಕೋರ್) ದಾಖಲೆ ಯಾರ ಹೆಸರಿನಲ್ಲಿದೆ
ಎ) ಸಚಿನ್ ತೆಂಡೂಲ್ಕರ್,  ಬಿ) ಗ್ಯಾರಿ ಸೋಬರ್ಸ್,  ಸಿ) ಬ್ರಿಯಾನ್ ಲಾರಾ,  ಡಿ) ವೀರೇಂದ್ರ ಸೆಹವಾಗ್


ಜಲಾಂತರರ್ಗಾಮಿಯಿಂದ ಸಮುದ್ರದ ಮೇಲ್ಮೈಯಲ್ಲಿರುವ ವಸ್ತುಗಳನ್ನು ವೀಕ್ಷಿಸಲು ಬಳಸುವ ಉಪಕರಣ ಯಾವುದು
ಎ) ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್), ಬಿ) ದೂರದರ್ಶಕ (ಟೆಲಿಸ್ಕೋಪ್), ಸಿ) ಪೆರಿಸ್ಕೋಪ್,  ಡಿ) ಎಲೆಕ್ಟ್ರೋಸ್ಕೋಪ್


ಮಲ್ಲಯುದ್ಧ(ಕುಸ್ತಿ)ದಲ್ಲಿ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬಂಗಾರದ ಪದಕ ಗಳಿಸಿದ ಪ್ರಥಮ ಭಾರತೀಯ ಕುಸ್ತಿಪಟು ಯಾರು
ಎ) ದಾರಾಸಿಂಗ್,  ಬಿ) ಸತ್ಪಾಲ್ ಸಿಂಗ್,  ಸಿ) ಸುಶೀಲ್ ಕುಮಾರ್,  ಡಿ) ವಿಜೇಂದರ್ ಸಿಂಗ್


2010ರಲ್ಲಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲ್ಪಟ್ಟ ಕರ್ನಾಟಕದ ಜನಪ್ರಿಯ ಸಿನಿಮಾ ಮತ್ತು ರಂಗಕರ್ಮಿ ಇವರಲ್ಲಿ ಯಾರು
ಎ) ಉಮಾಶ್ರಿ,  ಬಿ) ಸರೋಜಾದೇವಿ,  ಸಿ) ಬಿ.ಜಯಶ್ರೀ,  ಡಿ) ಜಯಮಾಲ


ಇವರಲ್ಲಿ ಯಾರು ನಮಗೆ ಯೋಗ ಸೂತ್ರ ಗಳನ್ನು ನೀಡಿದವರು ಯಾರು
ಎ) ಕಣಾದ,  ಬಿ) ವ್ಯಾಸ,  ಸಿ) ಪತಂಜಲಿ,  ಡಿ) ಗೌತಮ


ಮಲೇಷ್ಯಾ ದೇಶದ ಹಣದ ಹೆಸರು
ಎ) ಬಾಟ್,  ಬಿ) ರಿಂಗಿಟ್,  ಸಿ) ಯೆನ್,  ಡಿ) ಡಾಲರ್


ಮಿಸ್ ವರ್ಲ್ಡ್ - ವಿಶ್ವಸುಂದರಿ ಪಟ್ಟವನ್ನು ಗಳಿಸಿದ ಪ್ರಥಮ ಭಾರತೀಯಳು
ಎ) ಐಶ್ವರ್ಯ ರೈ,  ಬಿ) ರೀಟಾ ಫಾರಿಯಾ,  ಸಿ) ಸುಷ್ಮಿತಾ ಸೇನ್,  ಡಿ) ಲಾರಾದತ್ತ


ಈ ಕೆಳಕಾಣಿಸಿದ ದೇಶಗಳಲ್ಲಿ ಡೆಮಾಸ್ಕಸ್ ಯಾವುದರ ರಾಜಧಾನಿ
ಎ) ಲೆಬನಾನ್,  ಬಿ) ಇರಾಕ್,  ಸಿ) ಇರಾನ್,  ಡಿ) ಸಿರಿಯಾ


ಈ ಕೆಳಗಿನವುಗಳಲ್ಲಿ 1961ರಲ್ಲಿ ಭಾರತೀಯ ಸೈನ್ಯದಿಂದ ಪೋರ್ಚುಗೀಸರ ನಿಯಂತ್ರಣದಿಂದ ಸ್ವತಂತ್ರಗೊಳಿಸಲ್ಪಟ್ಟ ಪ್ರದೇಶ ಯಾವುದು
ಎ) ಪಾಂಡಿಚೇರಿ,  ಬಿ) ಹೈದರಾಬಾದ್,  ಸಿ) ಗೋವಾ,  ಡಿ) ಜುನಾಗಢ


20 ಪುರುಷರು 40 ಗುಣಿಗಳನ್ನು 60 ದಿನಗಳಲ್ಲಿ ಅಗೆಯುವುದಾದರೆ 10 ಪುರುಷರು 20 ಗುಣಿಗಳನ್ನು ಎಷ್ಟು ದಿನಗಳಲ್ಲಿ ಅಗೆಯುವರು
ಎ) 30 ದಿನಗಳು,  ಬಿ) 45 ದಿನಗಳು,  ಸಿ) 60 ದಿನಗಳು,  ಡಿ) 75 ದಿನಗಳು


ಇವರಲ್ಲಿ ಯಾರ ಹೆಸರಿನೊಂದಿಗೆ ಬೇಲೂರು ಮಥ ಗುರುತಿಸಲ್ಪಟ್ಟಿದೆ
ಎ) ಈಶ್ವರ ಚಂದ್ರ ವಿದ್ಯಾಸಾಗರ,  ಬಿ) ಶಂಕರಾಚಾರ್ಯ,  ಸಿ)  ವಿವೇಕಾನಂದ,  ಡಿ) ರಾಜಾರಾಮ ಮೋಹನ ರಾಯ್,


ಇವರಲ್ಲಿ ಯಾರಿಂದ ಕನ್ನಡದ ಕಾದಂಬರಿ ಕವಲು ಬರೆಯಲ್ಪಟ್ಟಿದೆ 
ಎ) ಕುವೆಂಪು,  ಬಿ) ಎಸ್.ಎಲ್.ಬೈರಪ್ಪ,  ಸಿ) ಲಂಕೇಶ್,  ಡಿ) ಯು.ಆರ್.ಅನಂತಮೂರ್ತಿ


ಫೋರ್ತ್ ಎಸ್ಟೇಟ್ ಎಂದರೆ
ಎ) ಮಾಧ್ಯಮಗಳು,  ಬಿ) ಹಿಂದುಳಿದ ರಾಜ್ಯಗಳು,  ಸಿ) ನ್ಯಾಯಾಂಗ  ಡಿ) ಟೀ ಎಸ್ಟೇಟ್


ಇವುಗಳಲ್ಲಿ ಯಾವುದು ನಾಗಾಲ್ಯಾಂಡ್ ರಾಜ್ಯದ ಅಧಿಕೃತ ಭಾಷೆ
ಎ) ಆಂಗ್ಲಭಾಷೆ,  ಬಿ) ಹಿಂದಿ ಭಾಷೆ,  ಸಿ) ಅಸ್ಸಾಮಿ ಭಾಷೆ,  ಡಿ) ನಾಗಾ ಭಾಷೆ


ಈ ಕೆಳಕಾಣಿಸಿದ ಕ್ರಿಯೆಗಳಲ್ಲಿ ಯಾವುದರಲ್ಲಿ ಉಷ್ಣಬಿಡುಗಡೆಯಾಗುವುದು
ಎ) ಮಂಜುಗಡ್ಡೆ ಕರಗುವಾಗ,  ಬಿ) ಅನಿಲ ಸಾಂದ್ರಗೊಳ್ಳುವಾಗ,  ಸಿ) ನೀರು ಕುದಿಯುವಾಗ,  ಡಿ) ನೀರಿನ ಉಷ್ಣತೆಯನ್ನು ಹೆಚ್ಚಿಸಿದಾಗ


ಹಲ್ಲು ಮತ್ತು ಮೂಳೆಗಳಿಗೆ ಅವಶ್ಯಕವಾದ ಖನಿಜಗಳು
ಎ) ಕ್ಯಾಲ್ಶಿಯಂ ಮತ್ತು ಸೋಡಿಯಂ,  ಬಿ) ಕ್ಯಾಲ್ಶಿಯಂ ಮತ್ತು ಪೊಟಾಶಿಯಂ,  ಸಿ) ಕ್ಯಾಲ್ಶಿಯಂ ಮತ್ತು ಫಾಸ್ಫರಸ್,  ಡಿ) ಕ್ಯಲ್ಶಿಯಂ ಮತ್ತು ಕಬ್ಬಿಣ


ಇವರಲ್ಲಿ ಯಾರ ಹೆಸರಿನೊಂದಿಗೆ ಪೌನಾರ್ ಆಶ್ರಮ ಸೇರಿಕೊಂಡಿದೆ
ಎ) ಮಹಾತ್ಮ ಗಾಂಧಿ,  ಬಿ) ಅರವಿಂದರು,  ಸಿ) ವಿನೋಭ ಭಾವೆ,  ಡಿ) ರವಿಶಂಕರ್


ಈಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿದೆ
ಎ) ಕೊಲ್ಕತ್ತ,  ಬಿ) ನವದೆಹಲಿ,  ಸಿ) ಮುಂಬೈ,  ಡಿ) ಚೆನೈ


ತುಲಸಿದಾಸರು ಯಾವ ಭಾಷೆಯಲ್ಲಿ ರಾಮಚರಿತ ಮಾನಸವನ್ನು ಬರೆದಿದ್ದಾರೆ
ಎ) ಭೋಜಪುರಿ, ಬಿ) ಹಿಂದಿ,  ಸಿ) ಪಾಲಿ,  ಡಿ) ವ್ರಜ (ಬೃಜ) ಭಾಷೆ


ಸತ್ಯ ಶೋಧಕ ಸಮಾಜದ ಸ್ಥಾಪಕರು
ಎ) ಜ್ಯೋತಿಬಾ ಫುಲೆ,  ಬಿ) ಬಿ.ಆರ್.ಅಂಬೇಡ್ಕರ್,  ಸಿ) ರಾಮಸ್ವಾಮಿ ನಾಯ್ಕರ್,   ಡಿ) ರವೀಂದ್ರನಾಥ ಠ್ಯಾಗೂರ್


ಪತ್ರಿಕಾ ಸ್ವಾತಂತ್ರವು ಸಂವಿಧಾನದ ಯಾವ ವಿಧಿಯನ್ನು ಆಧರಿಸಿ ರೂಪುಗೊಂಡಿದೆ
ಎ) ವಿಧಿ 21,  ಬಿ) ವಿಧಿ 14,  ಸಿ) ವಿಧಿ 19  ಡಿ) ವಿಧಿ 16


ಮೊದಲನೆ ಮಹಾಯುದ್ಧವನ್ನು ಯಾವ ಒಪ್ಪಂದವು ಔಪಚಾರಿಕವಾಗಿ ಮುಕ್ತಾಯಗೊಳಿಸಿತು
ಎ) ವರ್ಸೆಲ್ಸ್ ಒಪ್ಪಂದ,  ಬಿ) ಪ್ಯಾರಿಸ್ ಒಪ್ಪಂದ,  ಸಿ) ವಾಷಿಂಗ್ಟನ್ ಒಪ್ಪಂದ,  ಡಿ) ಲಂಡನ್ ಒಪ್ಪಂದ


ಇವುಗಳಲ್ಲಿ ಯಾವುದಕ್ಕೆ ಕ್ಯೂಟೋ ಪ್ರೊಟೊಕೋಲ್ ಸಂಬಂಧಿಸಿದೆ
ಎ) ಇಂಧನಕ್ಕೆ ಸರಿಯಾದ ಮಾರುಕಟ್ಟೆ ದರ ಸಿಗುವಂತೆ ಮಾಡಲು,  ಬಿ) ಲ್ಯಾಂಡ್ ಮೈನ್ ( ನೆಲಸ್ಪೋಟಕ) ಗಳ ಬಳಕೆಯನ್ನು ಕಡಿಮೆ ಮಾಡಲು,  ಸಿ) ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂತತಿಯನ್ನು ರಕ್ಷಿಸುವ ಬಗ್ಗೆ,  ಡಿ) ಹಸಿರುಮನೆ ಪರಿಣಾಮವನ್ನುಂಟು ಮಾಡುವ ಅನಿಲಗಳನ್ನು ಕಡಿಮೆ ಮಾಡುವ ಬಗ್ಗೆ


ಇವುಗಳಲ್ಲಿ ಯಾವುದರಿಂದ ಡೆಂಗ್ಯು ಜ್ವರ ಬರುತ್ತದೆ
ಎ) ಏಡಿಸ್ ಸೊಳ್ಳೆ,  ಬಿ) ಕ್ಯೂಲೆಕ್ಸ್ ಸೊಳ್ಳೆ,  ಸಿ) ಅನಾಫಿಲಿಸ್ ಸೊಳ್ಳೆ,  ಡಿ) ಟ್ಸೆ-ಟ್ಸೆ ನೊಣ


ತೇನ್ಸಿಂಗ್ ನಾರ್ಗೆ ಮತ್ತು ಎಡ್ಮಂಡ್ ಹಿಲರಿ ಇವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವರ್ಷ
ಎ) 1965,  ಬಿ) 1954,  ಸಿ) 1953,  ಡಿ) 1966


ಯಾವ ದೇಶವು 2010ರ ವಿಶ್ವಕಪ್ ಫುಟ್ಬಾಲ್ ನಲ್ಲಿ ಜಯಗಳಿಸಿದೆ
ಎ) ಸ್ಪೇಯ್ನ್,  ಬಿ) ಇಟಲಿ,  ಸಿ) ನೆದರ್ ಲ್ಯಾಂಡ್,  ಡಿ) ಬ್ರೆಜಿಲ್


ವಿಶ್ವಸಂಸ್ಥೆ (ಯು.ಎನ್.ಓ) ಅಸ್ತಿತ್ವಕ್ಕೆ ಬಂದ ವರ್ಷ
ಎ) 1943,  ಬಿ) 1944,  ಸಿ) 1945,  ಡಿ) 1946


ಕುಸುಮ ಬಾಲೆ ಈ ಕೃತಿಯ ಕರ್ತೃ
ಎ) ದೇವನೂರು ಮಹದೇವ,  ಬಿ) ಎಸ್.ಎಲ್ ಬೈರಪ್ಪ,  ಸಿ) ಯು.ಆರ್.ಅನಂತಮೂರ್ತಿ,  ಡಿ) ಲಂಕೇಶ್


ಇವುಗಳಲ್ಲಿ ಯಾವುದರಿಂದ ಅಂಡಮಾನ್ ಸಮೂಹದ ಮತ್ತು ನಿಕೋಬಾರ್ ಸಮೂಹದ ದ್ವೀಪಗಳು ಪರಸ್ಪರ ಬೇರ್ಪಡಿಸಲ್ಪಟ್ಟಿವೆ
ಎ) ಗ್ರೇಟ್ ಚಾನೆಲ್,  ಬಿ) ಟೆನ್ ಡಿಗ್ರಿ ಚಾನೆಲ್,  ಸಿ) ಬಂಗಾಳ ಕೊಲ್ಲಿ,  ಡಿ) ಅಂಡಮಾನ್ ಸಮುದ್ರ


ಸೀ ಬರ್ಡ್ ನೌಕಾನೆಲೆ ಇಲ್ಲಿದೆ
ಎ) ಕೊಚ್ಚಿನ್,  ಬಿ) ಕಾರವಾರ,  ಸಿ) ವಿಶಾಖ ಪಟ್ಟಣ, ಡಿ) ಪಾಂಡಿಚೇರಿ


ಗಾಂಧೀಜಿಯನ್ನು ಮಹಾತ್ಮ ಎಂದು ಪ್ರಥಮ ಬಾರಿಗೆ ಕರೆದಿದ್ದುಯಾರು
ಎ) ಲೋಕಮಾನ್ಯ ತಿಲಕರು,  ಬಿ) ಗೋಪಾಲ ಕೃಷ್ಣ ಗೋಖಲೆ,  ಸಿ) ಜವಾಹರ ಲಾಲ್ ನೆಹರು,  ಡಿ) ರವೀಂದ್ರ ನಾಥ ಟ್ಯಾಗೂರ್


ಒಂದು ವೇಳೆ HKUJ ಏನ್ನುವುದು FISH ಎಂದಾದರೆ UVCD ಎನ್ನುವುದು ಏನಾಗುವುದು
ಎ) STAR,   ಬಿ)STAK,  ಸಿ)STAL,  ಡಿ)STAB


ಭಾರತವು ಸ್ವತಂತ್ರವಾದಾಗ ಇವರಲ್ಲಿ ಯಾರು ಬ್ರಿಟನ್ನಿನ (ಇಂಗ್ಲೆಂಡಿನ) ಪ್ರಧಾನಮಂತ್ರಿಯಾಗಿದ್ದವರು
ಎ) ವಿನ್ಸ್ಟನ್ ಚರ್ಚಿಲ್,  ಬಿ) ಕ್ಲೆಮೆಂಟ್ ಅಟ್ಲಿ,  ಸಿ) ಲಾರ್ಡ್ ಮೌಂಟ್ ಬ್ಯಾಟನ್,  ಸಿ) ನೆವಿಲ್ ಚೇಂಬರ್ ಲೇನ್


ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಪ್ರಧಾನ ಮಂತ್ರಿ
ಎ) ಸಿರಿಮಾವೋ ಬಂದಾರನಾಯಕೆ,  ಬಿ) ಇಂದಿರಾ ಗಾಂಧಿ,  ಸಿ) ಗೊಲ್ಡಾಮೀರ್,  ಡಿ) ಮಾರ್ಗರೆಟ್ ಥ್ಯಾಚರ್No comments:

Post a Comment