Tuesday 6 August 2013

M Ebility VI





ಮೊದಲೆರಡು ಸಂಖ್ಯೆಗಳು ಮೂರನೆ ಸಂಖ್ಯೆಗೆ ಕ್ರಮವಾಗಿ 25% ಮತ್ತು 20% ಕಡಿಮೆಯಿದ್ದರೆ ಮೊದಲ ಸಂಖ್ಯೆಯು ಎರಡನೆ ಸಂಖ್ಯೆಯ ಶೇಕಡಾ ಎಷ್ಟು ವ್ಯತ್ಯಾಸವಿದೆ

ಎ) 5.85%,  ಬಿ) 75.85%,   ಸಿ) 80.60%  ಡಿ) 93.75%





ಒಂದು ಪಂಪು ನೀರಿನ ಟ್ಯಾಂಕನ್ನು 2 ಗಂಟೆಗಳಲ್ಲಿ ತುಂಬುತ್ತದೆ.  ಆದರೆ ಟ್ಯಾಂಕಿನ ಸೋರಿಕೆಯಿಂದ ಇದು 2 1/3 ಗಂಟೆಗಳಲ್ಲಿ ತುಂಬುತ್ತದೆ.  ಹಾಗಾದರೆ ಸೋರಿಕೆಯು ಪೂರ್ತಿ ಟ್ಯಾಂಕನ್ನು ಖಾಲಿಮಾಡುವ ಅವಧಿ ಎಷ್ಟು?

ಎ) 8 ಗಂಟೆ,  ಬಿ) 7 ಗಂಟೆ,  ಸಿ) 13 ಗಂಟೆ,  ಡಿ) 14 ಗಂಟೆ





ಒಂದು ಕೆಲಸವನ್ನು Aಯು 4 ಗಂಟೆಗಳಲ್ಲಿ ಮಾಡುತ್ತಾನೆ, B&C ಒಟ್ಟುಗೂಡಿ 3 ಗಂಟೆಯಲ್ಲಿ ಮಾಡುತ್ತಾರೆ

A&C ಒಟ್ಟುಗೂಡಿ 2 ಗಂಟೆಯಲ್ಲಿ ಮಾಡುತ್ತಾರೆ ಹಾಗಾದರೆ B ಮಾತ್ರ ಎಷ್ಟು ಗಂಟೆಯಲ್ಲಿ ಮುಗಿಸುತ್ತಾನೆ?

ಎ) 10 ಗಂ,  ಬಿ) 12 ಗಂ,  ಸಿ) 8 ಗಂ,  ಡಿ) 24 ಗಂಟೆ





ಮೂರು ತರಗತಿಯ ವಿದ್ಯಾರ್ಥಿಗಳ ಸರಾಸರಿ 2:3:5 ಯಿದ್ದು ನಂತರ ಪ್ರತಿ ತರಗತಿಗೆ 40

ವಿದ್ಯಾರ್ಥಿಗಳಂತೆ ಹೆಚ್ಚಾದಾಗ ಪ್ರತಿತರಗತಿಯ ಸರಾಸರಿಯು 4:5:7 ಆಗುತ್ತದೆ, ಹಾಗಾದರೆ ಮೊದಲಿದ್ದ

ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

ಎ) 100,  ಬಿ) 180,  ಸಿ) 200,  ಡಿ) 400





ಇಬ್ಬರು ವ್ಯಕ್ತಿಗಳ ಸರಾಸರಿ ಆದಾಯ 5:3ಇದ್ದು  ಅವರ ಖರ್ಚು ಸರಾಸರಿ 9:5 ಆಗಿದ್ದು, ಪ್ರತಿ ವ್ಯಕ್ತಿಯು ಕ್ರಮವಾಗಿ 1300 ಮತ್ತು 900 ರೂಗಳನ್ನು ಉಳಿತಾಯ ಮಾಡಿದರೆ ಆ ವ್ಯಕ್ತಿಗಳ ಆದಾಯ ಎಷ್ಟು?

ಎ) 4000 & 2400 ರೂ,  ಬಿ) 3000 & 1800 ರೂ,  ಸಿ) 5000 & 3000 ರೂ, 

ಡಿ) 4500 & 2700 ರೂ





ಒಂದು ಕೋಟೆಯಲ್ಲಿ 50 ದಿನಗಳಿಗಾಗುವಷ್ಟು ಧಾನ್ಯಗಳಿದ್ದು 10 ದಿನಗಳನಂತರ ಕೋಟೆಯಲ್ಲಿನ ಜನಸಂಖ್ಯೆ 500 ಆದಾಗ ಉಳಿದ ಧಾನ್ಯವು 35 ದಿನಗಳಷ್ಟಾದರೆ ಆ ಕೋಟೆಯಲ್ಲಿ ಮೊದಲಿದ್ದ ಜನರ ಸಂಖ್ಯೆ ಎಷ್ಟು?

ಎ) 3500,  ಬಿ) 3000,  ಸಿ) 2500,  ಡಿ) 4000





ಒಂದು ಸಂಖ್ಯೆಯು 20% ರಷ್ಟು ಹೆಚ್ಚಾಗಿ ನಂತರ 10% ರಷ್ಟು ಕಡಿಮೆಯಾದರೆ ನಿವ್ವಳ ಶೇಕಡ ಎಷ್ಟು ಏರಿಕೆ ಅಥವಾ ಇಳಿಕೆಯಾಗಿದೆ?

ಎ) 10% ಏರಿಕೆ,  ಬಿ) 10% ಇಳಿಕೆ,  ಸಿ) 8% ಏರಿಕೆ ,  ಡಿ) 8% ಇಳಿಕೆ





ಎರಡು ಸಂಖ್ಯೆಗಳ ಗುಣಲಬ್ದ 2500, ಆ ಎರಡು ಸಂಖ್ಯೆಗಳ ವ್ಯತ್ಯಾಸ 1:5 ಆದರೆ ಆ ಎರಡು ಸಂಖ್ಯೆಗಳ ಮೊತ್ತ ಎಷ್ಟು?

ಎ) 25,  ಬಿ)  125,  ಸಿ) 225,  ಡಿ) 250





ಕೆಳಗಿನ ಯಾವ ಗರಿಷ್ಠ ಸಂಖ್ಯೆಯು ನಿಖರವಾಗಿ 7, 9 & 15 ರಿಂದ ಭಾಗವಾಗುತ್ತದೆ

ಎ) 9450,  ಬಿ) 9765,  ಸಿ) 9865,  ಡಿ) 9550





5/8 ಇದು 8/5 ರ ಶೇಕಡ ಎಷ್ಟು?

ಎ) 100%,  ಬಿ) 64%,  ಸಿ) 256% ,  ಡಿ) 1024%





4x = 10 ಆದರೆ x=?

ಎ) 10-4,  ಬಿ) 10*4, ಸಿ) 10+4, ಡಿ) 10/4





10ನ್ನು x ಸಂಖ್ಯೆಯ 5 ಬಾರಿ ಕೂಡಿದರೆ

x
ಸಂಖ್ಯೆಯು 20ಕ್ಕೆ ಸಮನಾಗಿರುತ್ತದೆ ಇದರ ಅರ್ಥ?

ಎ) 5(x+10)=20,  ಬಿ)5x+10=20ಸಿ)x/5 + 10=20,  ಡಿ)5x-10=20





ಒಂದು ತ್ರಿಕೋನದಲ್ಲಿ 2 ಬದಿಗಳು 8ಸೆಂಮೀ & 11 ಸೆಂಮೀ ಆದರೆ ಮೂರನೆಯ ಸಂಭಾವನೀಯ ಬದಿ?

ಎ) 1ಸೆಂಮೀ,  ಬಿ)2ಸೆಂಮೀ,  ಸಿ) 3ಸೆಂಮೀ,  ಡಿ) 4 ಸೆಂಮೀ





A & B ಎಂಬ ಎರಡು ರೈಲುಗಳು ಒಂದೇ ನೇರದಲ್ಲಿ 45ಕೀಮೀ ಮತ್ತು 25 ಕಿಮೀ ಗಂಟೆಯ ವೇಗದಲ್ಲಿ ಚಲಿಸುತ್ತಿದೆ. ಅವುಗಳಲ್ಲಿ ವೇಗದ ರೈಲಾದ A ರೈಲು, B ರೈಲಿನಲ್ಲಿ ಕುಳಿತಿರುವ  ಒಬ್ಬ ಮನುಷ್ಯನನ್ನು 18 ಸೆಕೆಂಡಿನಲ್ಲಿ ದಾಟಿದರೆ A ರೈಲಿನ ಉದ್ದ ಎಷ್ಟು?

ಎ) 100ಮೀ,  ಬಿ) 120 ಮೀ,  ಸಿ) 150 ಮೀ,  ಡಿ) 180ಮೀ









A ಮತ್ತು B ಪಾಲುದಾರರಾಗಿ ಒಂದು ವ್ಯಾಪಾರವನ್ನು ಪ್ರಾರಂಭಿಸಿದರು A ಯು 6 ತಿಂಗಳ ಕಾಲ 2000 ರೂಗಳನ್ನು ಮತ್ತು Bಯು 8 ತಿಂಗಳ ಕಾಲ 1500 ರೂಗಳನ್ನು ಬಂಡವಾಳ ಹೂಡಿದರು.  ಆ ವ್ಯಾಪಾರದಲ್ಲಿ ಒಟ್ಟು ಲಾಭ ರೂ.510 ಬಂದರೆ ಅದರಲ್ಲಿ Aಯ ಪಾಲೆಷ್ಟು?

ಎ) 250,  ಬಿ) 255,  ಸಿ) 275,  ಡಿ) 280



ಒಬ್ಬ ಅಂಗಡಿಯಾತ 50 ಪೆನ್ನುಗಳನ್ನು 500 ರೂಗಳಿಗೆ ಕೊಂಡು ಅದರಲ್ಲಿ ಕೆಲವನ್ನು 30% ಲಾಭಕ್ಕೆ ಮಾರಿ, ಉಳಿದವನ್ನು 10% ನಷ್ಟಕ್ಕೆ ಮಾರಿದನು, ಕಡೆಯಲ್ಲಿ ಅವನಿಗೆ ಎಲ್ಲಾ ಮೊತ್ತದಲ್ಲಿ 10% ಲಾಭಬಂದರೆ ಅವನು ಲಾಭಕ್ಕೆ ಮಾರಿದ ಪೆನ್ನುಗಳ ಸಂಖ್ಯೆ ಎಷ್ಟು?

ಎ) 25,  ಬಿ) 30,  ಸಿ) 20,  ಡಿ) 15   ಇ) ಯಾವುದು ಅಲ್ಲ









A ಯು B ಗೆ 32,400 ರೂಗಳ ಸಾಲವನ್ನು ಕೊಟ್ಟಿದ್ದನು, Bಯು ಒಂದು ನಿರ್ಧಿಷ್ಟ ಮಾಸಿಕ ಕಂತಿನ ಮೊತ್ತದ ಮೇಲೆ ಪ್ರತಿತಿಂಗಳು ನಿರ್ಧಿಷ್ಟ 100 ರೂಗಳನ್ನು ಹೆಚ್ಚಿಸುತ್ತಾ ಹೋದಾಗ ಆ ಸಾಲವು 24 ತಿಂಗಳುಗಳಲ್ಲಿ ಮುಗಿಯುತ್ತದೆ ಹಾಗಾದರೆ Bಯು ಪಾವತಿಸಿದ ಮೊದಲ ಕಂತೆಷ್ಟು?

ಎ) 100,  ಬಿ) 200 ,  ಸಿ) 400,  ಡಿ) 500





ಒಂದು ರೈಲು ಒಂದು ಕಂಬವನ್ನು 15 ಸೆಕೆಂಡುಗಳಲ್ಲಿ ಮತ್ತು 100 ಮೀಟರ್ ಉದ್ದವಿರುವ ಪ್ಲಾಟ್ ಫಾರಂ ಅನ್ನು 25 ಸೆಕೆಂಡಿನಲ್ಲಿ ದಾಟಿದರೆ ರೈಲಿನ ಉದ್ದ ಎಷ್ಟು?

ಎ) 125 ಮೀ,  ಬಿ) 135 ಮೀ,  ಸಿ) 159ಮೀ ,  ಡಿ) 175 ಮೀ





A ಮತ್ತು B ಎಂಬ ಎರಡು ನಲ್ಲಿಗಳು ಒಂದು ನೀರಿನ ಟ್ಯಾಂಕನ್ನು ಕ್ರಮವಾಗಿ 12 ಮತ್ತು 15 ನಿಮಿಷಗಳಲ್ಲಿ ತುಂಬುತ್ತದೆ ಈ

ಎರಡು ನಲ್ಲಿಗಳನ್ನು ಒಟ್ಟಿಗೆ ತೆರೆದು 3 ನಿಮಿಷಗಳ ನಂತರ A ನಲ್ಲಿಯನ್ನು ನಿಲ್ಲಿಸಿದಾಗ B ನಲ್ಲಿಯು ಪೂರ್ಣ ಟ್ಯಾಂಕನ್ನು

ತುಂಬಲು ಎಷ್ಟು ಅವಧಿ ತೆಗೆದುಕೊಳ್ಳುತ್ತದೆ

ಎ) 7ನಿ 15 ಸೆ  ಬಿ) 7ನಿ 45 ಸೆ,  ಸಿ) 8ನಿ 5 ಸೆ,  ಡಿ) 8ನಿ 15 ಸೆ









A ಮತ್ತು B ಎಂಬ ಟ್ಯಾಂಕಿನ ಹಾಲು ಮತ್ತು ನೀರಿನ ಪ್ರಮಾಣ ಕ್ರಮವಾಗಿ 4:3 ಮತ್ತು 2:3 ಆಗಿದ್ದು ಎರಡನ್ನು ಸೇರಿಸಿದಾಗ ಹಾಲು ಮತ್ತು ನೀರಿನ ಪ್ರಮಾಣವು 1:1 ರಂತೆ ಸಮವಾಗಲು ಯಾವ ಸರಾಸರಿಯಂತೆ ಸೇರಿಸಬೇಕು

ಎ) 7:5,   ಬಿ) 1:2,  ಸಿ) 2:1,  ಡಿ) 6:5



ಒಂದು ಕಾರು ನಿರ್ಧಿಷ್ಟ ವೇಗದಲ್ಲಿ 715 ಕಿ.ಮೀ ದೂರವನ್ನು ಒಂದು ನಿರ್ಧಿಷ್ಟ ಕಾಲದಲ್ಲಿ ಕ್ರಮಿಸಿದೆ.  ಹೀಗಿದ್ದಾಗ ಕಾರಿನ ವೇಗ ಮೊದಲಿನ ವೇಗಕ್ಕಿಂತ ಗಂಟೆಗೆ 10 ಕಿ.ಮೀ ಹೆಚ್ಚಾದರೆ ಅದೇ ದೂರವನ್ನು ಮೊದಲಿನದಕ್ಕಿಂತ 2 ಗಂಟೆ ಕಡಿಮೆ ಅವಧಿಯಲ್ಲಿ ಕ್ರಮಿಸುತ್ತದೆ ಹಾಗಾದರೆ ಕಾರಿನ ಮೊದಲ ವೇಗ ಎಷ್ಟು?

ಎ) 45 ಕಿಮೀ,  ಬಿ) 50 ಕಿಮೀ,  ಸಿ) 55 ಕಿಮೀ ,  ಡಿ) 65 ಕಿಮೀ



ಒಬ್ಬ ವ್ಯಕ್ತಿಯು ಒಂದು ನಿರ್ಧಿಷ್ಟ ದೂರವನ್ನು 12 ಗಂಟೆಯಲ್ಲಿ ಕ್ರಮಿಸುತ್ತಾನೆ.  ಅವನು ಅರ್ಧದೂರವನ್ನು 75 ಕಿ.ಮೀ ವೇಗದಲ್ಲಿ ರೈಲಿನಲ್ಲಿ ಮತ್ತು 45 ಕಿಮೀ ವೇಗದಲ್ಲಿ ಉಳಿದರ್ಧವನ್ನು ಕಾರಿನಲ್ಲಿ ಕ್ರಮಿಸಿದರೆ ಅವನು ಒಟ್ಟು ಕ್ರಮಿಸಿದ ದೂರ?

ಎ) 450 ಕಿಮೀ,  ಬಿ) 675 ಕಿಮೀ ,  ಸಿ) 337.5 ಕಿಮೀ, ಡಿ) 1350 ಕಿಮಿ




No comments:

Post a Comment